Advertisement

ವಿಕ್ರಾಂತ್ ರೋಣ: ಕಿಚ್ಚನ ಫ್ಯಾಂಟಸಿ ಲೋಕಕ್ಕೆ ರಮೇಶ್‌ ಅರವಿಂದ ಮೆಚ್ಚುಗೆ

10:15 AM Jun 12, 2022 | Team Udayavani |

“ವಿಕ್ರಾಂತ್‌ ರೋಣ’ ಕಿಚ್ಚ ಸುದೀಪ ಅಭಿನಯದ, ಕನ್ನಡ ಚಿತ್ರರಂಗದ ಮತ್ತೂಂದು ಬಹುನೀರಿಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ. ಇಗಾಗಲೇ ಚಿತ್ರದ ಬಗ್ಗೆ ಕ್ರೇಜ್‌ ಸೃಷ್ಟಿಯಾಗಿದೆ. ಇನ್ನು ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌ ಹೆಜ್ಜೆ ಹಾಕಿರುವ ಚಿತ್ರದ “ರಾ.. ರಾ.. ರಕ್ಕಮ್ಮ…’ ಹಾಡು ಸಖತ್‌ ಸೌಂಡ್‌ ಮಾಡುತ್ತಿದ್ದು, ಸ್ವತಃ ಕಿಚ್ಚ ಸುದೀಪ್‌ ಈ ಹಾಡಿಗೆ ರೀಲ್ಸ್‌ ಮಾಡಿ ಅಭಿಮಾನಿಗಳು ಬಾಯ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

Advertisement

ಪ್ಯಾನ್‌ ಇಂಡಿಯಾ ಚಿತ್ರದ ಜೊತೆಗೆ 3ಡಿ ಚಿತ್ರವಾಗಿರುವ “ವಿಕ್ರಾಂತ್‌ ರೋಣ’ ಕುರಿತು ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಚಿತ್ರರಂಗದಲ್ಲೂ ಸಾಕಷ್ಟು ಕುತೂಹವಿದೆ. ಇದೇ ಜುಲೈ 28 ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿರುವ “ವಿಕ್ರಾಂತ್‌ ರೋಣ’ ಸಿನಿಮಾದ ಬಗ್ಗೆ ಇದೀಗ ನಟ ಕಂ ನಿರ್ದೇಶಕ ರಮೇಶ್‌ ಅರವಿಂದ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇತ್ತೀಚಿಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನಟ ರಮೇಶ್‌ ಅರವಿಂದ್‌ ಹಾಗೂ ಸುದೀಪ್‌ ಒಟ್ಟಿಗೇ ವೇದಿಕೆ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ರಮೇಶ್‌, “ಸುದೀಪ್‌ ಕರೆ ಮಾಡಿ “ವಿಕ್ರಾಂತ್‌ ರೋಣ’ ಸಿನಿಮಾ ನೋಡಲು ಆಹ್ವಾನಿಸಿದರು. ಸಿನಿಮಾದ ಬಿಡುಗಡೆಗೂ ಮುನ್ನ ಸಿನಿಮಾವನ್ನು ತೋರಿಸಲು ಧೈರ್ಯ ಬೇಕು. ಅಂತಹ ಆತ್ಮವಿಶ್ವಾಸದಿಂದ ಮಾಡಿರುವ ಸಿನಿಮಾ “ವಿಕ್ರಾಂತ್‌ ರೋಣ’. ನಿಜಕ್ಕೂ ಒಂದು ಫ್ಯಾಂಟಸಿ ಜಗತ್ತನ್ನೇ ಸೃಷ್ಟಿಸಿದೆ. ಈ ಜಗತ್ತಿನಲ್ಲಿ 3ಡಿ ಮೂಲಕ ಸಸ್ಪೆನ್ಸ್‌-ಥ್ರಿಲ್ಲರ್‌ ಅದ್ಬುತವಾಗಿ ಮೂಡಿ ಬಂದಿದೆ. ಎಲ್ಲರೂ ನೋಡಿ ಹಾರೈಸಿ’ ಎಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:ದಾಸುನ್ ಶನಕ ಬೊಂಬಾಟ್ ಬ್ಯಾಟಿಂಗ್ ಗೆ ಬೆಚ್ಚಿದ ಆಸೀಸ್; ಜಯ ಕಸಿದ ಲಂಕಾ ನಾಯಕ

ಚಿತ್ರದಲ್ಲಿ ಸುದೀಪ್‌ ಜೊತೆ ನಿರೂಪ್‌ ಭಂಡಾರಿ, ನೀತಾ ಅಶೋಕ್‌, ಜಾಕ್ವೆಲಿನ್‌ ಫ‌ರ್ನಾಂಡಿಸ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಾಕ್‌ ಮಂಜು, ಅಲಂಕಾರ್‌ ಪಾಂಡಿಯನ್‌ ನಿರ್ಮಿಸಿರುವ ಚಿತ್ರಕ್ಕೆ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. “ವಿಕ್ರಾಂತ್‌ ರೋಣ’ ಚಿತ್ರಕ್ಕೆ ವಿಲಿಯಂ ಡೇವಿಡ್‌ ಛಾಯಾಗ್ರಹಣ, ಆಶಿಕ್‌ ಕುಸುಗೊಳ್ಳಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next