ಚಂದನ ವಾಹಿನಿಯಲ್ಲಿ ಪ್ರಸಾರವಾಗುವ “ಮಧುರ ಮಧುರವೀ ಮಂಜುಳಗಾನ’ ಕನ್ನಡದ ಜನಪ್ರಿಯ ಗಾನಮಾಲಿಕೆ ಕಾರ್ಯಕ್ರಮ. ಸರಳತೆಯೇ ಕಾರ್ಯಕ್ರಮದ ಜನಪ್ರಿಯತೆಗೆ ಕಾರಣ. ಕಲಾನಮನ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಈ ಬಾರಿಯ “ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮ ಮೂಡಿಬರುತ್ತಿದೆ. ಈ ಬಾರಿಯ ವಿಶೇಷ, ನಟ ರಮೇಶ್ ಅರವಿಂದ್ ಹಾಡುಗಳು. ಮುಖ್ಯಅತಿಥಿಗಳಾಗಿ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಪಿ.ಎಚ್.ವಿಶ್ವನಾಥ್, ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್.ಎನ್. ಸುರೇಶ್, ರಾಧಿಕಾ ಚೇತನ್,ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ, ಬಿಬಿಎಂಪಿ ಸದಸ್ಯ ಬಿ.ಎಸ್. ಸತ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ. ನಟ ರಮೇಶ್ ಅರವಿಂದ್ ಕೂಡಾ ಉಪಸ್ಥಿತರಿರಲಿದ್ದಾರೆ.
ನ್.ಎಸ್.ಶ್ರೀಧರಮೂರ್ತಿ ಕಾರ್ಯಕ್ರಮ ನಿರೂಪಿಸಲಿದ್ದು ನಾಗಚಂದ್ರಿಕಾ ಭಟ್, ಶ್ರೀನಿವಾಸಮೂರ್ತಿ ಎಚ್.ಎಸ್.,ಗೋವಿಂದ ಕರ್ನೂಲ್, ಶ್ರೀಮತಿ ಮೇಘನಾ ಹಾಡಲಿದ್ದಾರೆ.
ಎಲ್ಲಿ?: ಬ್ಯೂಗಲ್‌ರಾಕ್ ಉದ್ಯಾನವನ, ಬಸವನಗುಡಿ
ಯಾವಾಗ?: ಮಾರ್ಚ್ 2, ಸಂಜೆ 5 | ಪ್ರವೇಶ: ಉಚಿತ