Advertisement

Ramcharitmanas ಕೃತಿಗೆ ಎಲ್ಲಿಲ್ಲದ ಬೇಡಿಕೆ: ಉಚಿತ ಡೌನ್‌ಲೋಡ್‌ಗೆ ಗೀತಾ ಪ್ರಸ್‌ ಅವಕಾಶ

11:56 PM Jan 14, 2024 | Team Udayavani |

ಗೋರಖ್‌ಪುರ: ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ದಿನ ಸಮೀಪಿಸುತ್ತಿರುವಂತೆಯೇ “ರಾಮಚರಿತ ಮಾನಸ’ ಕೃತಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಗೋರಖ್‌ಪುರದ ಗೀತಾ ಪ್ರಸ್‌, ತನ್ನ ವೆಬ್‌ಸೈಟ್‌ನಿಂದ ಉಚಿತವಾಗಿ ರಾಮಚರಿತ ಮಾನಸ ಕೃತಿಯನ್ನು ಡೌನ್‌ಲೋಡ್‌ ಮಾಡಲು ಅವಕಾಶ ಮಾಡಿಕೊಟ್ಟಿದೆ.

Advertisement

2022ರಿಂದ ಈವರೆಗೆ 75 ಸಾವಿರ ರಾಮಚರಿತ ಮಾನಸ ಪುಸ್ತಕಗಳನ್ನು ಗೀತಾ ಪ್ರಸ್‌ ಪ್ರಕಟಿಸಿದೆ. ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಈ ಕೃತಿಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಸದ್ಯದ ಮಟ್ಟಿಗೆ ಬೇಡಿಕೆಯಷ್ಟು ಪುಸ್ತಕಗಳನ್ನು ಮುದ್ರಿಸಲು ಸಾಧ್ಯವಾಗುತ್ತಿಲ್ಲ. ಒಂದೇ ಬಾರಿಗೆ 2ರಿಂದ 4 ಲಕ್ಷ ಕೃತಿ ಮುದ್ರಣ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಪುಸ್ತಕಗಳನ್ನು ಉಚಿತವಾಗಿ ನಮ್ಮ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡುತ್ತಿದ್ದೇವೆ ಎಂದು ಗೀತಾ ಪ್ರಸ್‌ನ ವ್ಯವಸ್ಥಾಪಕ ಲಾಲ್‌ಮಣಿ ತ್ರಿಪಾಠಿ ಹೇಳಿದ್ದಾರೆ. ಮಂಗಳವಾರದಿಂದ 15 ದಿನಗಳ ಕಾಲ ದೇಶವಾಸಿಗಳು ಉಚಿತವಾಗಿ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಒಟ್ಟು 50 ಸಾವಿರ ಜನರಿಗೆ ಡೌನ್‌ಲೋಡ್‌ ಅವಕಾಶ ಸಿಗಲಿದೆ. ಬೇಡಿಕೆ ಹೆಚ್ಚಿದರೆ ಈ ಸಾಮರ್ಥ್ಯವನ್ನು 1 ಲಕ್ಷಕ್ಕೆ ಏರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next