ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ರಾಮ್‌ಚರಣ್ ತೇಜ ಅವರ ಪತ್ನಿ ಉಪಾಸನಾ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದ ವ್ಯಕ್ತಿಯನ್ನು ರಾಮ್‌ಚರಣ್ ತೇಜ ಅವರ ಅಭಿಮಾನಿಗಳು ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಯೂಟ್ಯೂಬ್ ಚಾನೆಲ್‌ವೊಂದರಲ್ಲಿನ ಸಂದರ್ಶನದ ವೇಳೆ ರಾಮ್ ಮತ್ತು ಅವರ ಪತ್ನಿ ಬಗ್ಗೆ ಮಾನಹಾನಿಹರ ರೀತಿಯಲ್ಲಿ ಮಾತನಾಡಿದ್ದ. ಈ ಹೇಳಿಕೆಯಿಂದ ಕ್ರೋಧಗೊಂಡಿದ್ದ ರಾಮ್ ಚರಣ್ ಅವರ ಅಭಿಮಾನಿಗಳು ಸುನಿಶಿತ್ ಎಂಬ ವ್ಯಕ್ತಿಯನ್ನು ಕ್ಷಮೆ ಕೇಳಬೇಕೆಂದು ಥಳಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಸುನಿಶಿತ್ ಎಂಬವನು ಯೂಟ್ಯೂಬ್ ಚಾನಲ್‌ವೊಂದರ ಸಂದರ್ಶನದ ವೇಳೆ ʻನಾನು ಉಪಾಸನ ಜೊತೆ ಲಾಂಗ್ ಡ್ರೈವ್ ಮಾಡಿದ್ದೇನೆ. ಅವರು ನನ್ನ ಒಳ್ಳೆಯ ಸ್ನೇಹಿತೆ. ನಾವು ಜೊತೆಯಾಗಿ ಗೋವಾಗೆ ಹೋಗಿದ್ದೆವು, ರಾಮ್ ಚರಣ್ ಕೂಡಾ ನನ್ನ ಸ್ನೇಹಿತ. ಅವರು ನನ್ನೊಂದಿಗೆ ಮಾತನಾಡುವಾಗ ಹೇಗಾದರೂ ಮಾಡಿ ಉಪಾಸನ ನನ್ನನ್ನು ಮೆಚ್ಚುವಂತೆ ಮಾಡು ಎಂದು ನನ್ನ ಬಳಿ ಕೇಳಿಕೊಂಡಿದ್ದರುʼ ಎಂಬುದಾಗಿ ಹೇಳಿದ್ದ.
Related Articles
ಅದೂ ಅಲ್ಲದೇ ತಾನು ಚಿರಂಜೀವಿ ಅವರ ಮಗಳ ಜೊತೆಗೂ ದೂರದ ಪ್ರಯಾಣ ಮಾಡಿದ್ದೇನೆ ಎಂದು ಹೇಳಿದ್ದ.
ಇದನ್ನೂ ಓದಿ: ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್: ತಾಳಿಕೋಟೆ ಯುವಕನ ಬಂಧನ