ಮಂಗಳೂರು: ವಿಶ್ವವಿಖ್ಯಾತಿಯ ರ್ಯಾಂಬೊ ಸರ್ಕಸ್ ಮಂಗಳೂರಿನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಜನರ ಆಕರ್ಷಣೆಗೆ ಪಾತ್ರವಾಗಿದೆ.
ಬಂಗ್ರಕೂಳೂರು ಗೋಲ್ಡ್ಫಿಂಚ್ ಸಿಟಿ ಮುಂಭಾಗದ ಡೆಲ್ಟಾ ಗ್ರೌಂಡ್ನಲ್ಲಿ ಮಾ. 31ರಿಂದ ಪ್ರದರ್ಶನ ನೀಡುತ್ತಾ ಬಂದಿದೆ. ಮೈನವಿರೇಳಿಸುವ ಹೊಸ ಪ್ರಯೋಗ ಗಳೊಂದಿಗೆ ದಿಲ್ಲಿ, ಮುಂಬಯಿ, ಬೆಂಗಳೂರು, ಗೋವಾ ಹಾಗೂ ಇನ್ನೂ ಹಲವಾರು ಮಹಾನಗರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿರುವ ರ್ಯಾಂಬೋ ಸರ್ಕಸ್ ಇದೀಗ ತನ್ನ ಪೂರ್ಣ ಪ್ರಮಾಣದ ಮೋಡಿಮಾಡುವ 120 ನಿಮಿಷಗಳ ನವೀನ ಮಾದರಿಯ ಸರ್ಕಸನ್ನು ಪ್ರದರ್ಶಿಸುತ್ತಿದೆ.
ರ್ಯಾಂಬೊ ತಂಡವು ಬಬಲ್ ಶೋ, ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಸ್ವಾರ್ಡ್ ಆಕ್ಟ್, ಕ್ಯೂಬ್ ಜಗ್ಲಿಂಗ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಜತೆಗೆ ಅನೇಕ ಮನೋರಂಜನಾತ್ಮಕ ಆಟಗಳನ್ನು ಹೊಂದಿದೆ. ಜನರು ತಮ್ಮ ಬಾಲ್ಯದಲ್ಲಿ ಆನಂದಿಸಿದ ನಗು ತುಂಬಿದ ವಿದೂಷಕರನ್ನು ಮತ್ತೂಮ್ಮೆ ನೋಡುವ ಮೂಲಕ ಖುಷಿ ಪಡುತ್ತಾರೆ. ಅಲ್ಲದೆ ಮಕ್ಕಳಿಗೂ ಈ ಆಟಗಳನ್ನು ತೋರಿಸಿ ಮುದಗೊಳಿಸಬಹುದು.
ಪ್ರದರ್ಶನದ ಸಮಯದಲ್ಲಿ ಟಿಕೆಟ್ಗಳು ಕೌಂಟರ್ಗಳಲ್ಲಿ ಲಭ್ಯವಿದೆ.ಮುಂಗಡ ಕಾದಿರಿಸಲು ಡಿಡಿಡಿ.rಚಞಚಿಟcಜಿrcus.ಜಿn.ಗೆ ಲಾಗ್ಇನ್ ಮಾಡಿ. ಬುಕ್ ಮೈ ಶೋ ಆಪ್ ಮೂಲಕ ಸಹ ಕಾದಿರಿಸಿಕೊಳ್ಳಬಹುದಾಗಿದೆ.
ಪ್ರದರ್ಶನ ವಿವರ
ಸೋಮವಾರದಿಂದ ಶುಕ್ರವಾರ ವರೆಗೆ ಪ್ರತೀದಿನ 2 ಪ್ರದರ್ಶನ; ಸಂಜೆ 4.30 ಹಾಗೂ 7.30ಕ್ಕೆ ಶನಿವಾರ, ರವಿವಾರ ಮತ್ತು ರಜಾದಿನ 3 ಪ್ರದರ್ಶನ; ಮಧ್ಯಾಹ್ನ 1.30, ಸಂಜೆ 4.30, ರಾತ್ರಿ 7.30ಕ್ಕೆ