Advertisement
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆಹಿಡಿದಿರುವ “ಭಾವರಾಮಾಯಣ ರಾಮಾವತರಣ’ ಕೃತಿಯನ್ನು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ವಿ.ವಿ. ಆವರಣದ ಸಭಾಂಗಣದಲ್ಲಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಮೂಲ ರಾಮಾಯಣಕ್ಕೆ ಧಕ್ಕೆ
ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಮಾತನಾಡಿ, ಈ ಜಗತ್ತಿನಲ್ಲಿ ವ್ಯಾಪಿಸಿರುವ ನಕಲಿ ರಾಮಾಯಣ, ಮೂಲ ರಾಮಾಯಣಕ್ಕೆ ಹಾಗೂ ವಾಲ್ಮೀಕಿ ರಾಮಾಯಣಕ್ಕೆ ಧಕ್ಕೆ ಉಂಟಾಗಿರುವುದು ಈ ಕೃತಿ ರಚಿಸಲು ನಮಗೆ ಪ್ರೇರಣೆ. ನಾವು ನಂಬಿಕೊಂಡಿರುವ ರಾಮಾಯಣವೇ ಬೇರೆ, ನೈಜವಾಗಿರುವುದೇ ಬೇರೆ. ಮೂಲ ರಾಮಾಯಣ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಇದನ್ನು ಬರೆಯಲಾಗಿದೆ. ರಾಮಾಯಣ ಓದುವಾಗ ಸುಖ ಉಂಟಾಗಿ ಸಮಯ ಹೋಗುವುದು ಗೊತ್ತಾಗುವುದಿಲ್ಲ. ಮೂಲ ರಾಮಾಯಣ ಓದುತ್ತಾ ಹೋದರೆ, ಅದು ಶಿಕ್ಷಣ ಕೊಟ್ಟು ನಿಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ವಿವರಿಸಿದರು. ಏಮ್ ಹೈ ಕನ್ಸಲ್ಟಿಂಗ್ ಸಿಇಒ ಎನ್. ರವಿಶಂಕರ್ ಅವರು ಶ್ರೀ ರಾಘವೇಶ್ವರ ಸ್ವಾಮೀಜಿಗಳೊಂದಿಗೆ ಕೃತಿಯ ಕುರಿತು ಸಂವಾದ ನಡೆಸಿದರು.
Related Articles
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 108ಕ್ಕೂ ಹೆಚ್ಚು ಗಣ್ಯ ಸಾಧಕರು ಏಕಕಾಲದಲ್ಲಿ ಕೃತಿ ಲೋಕಾರ್ಪಣೆ ಮಾಡಿದ್ದು ವಿಶೇಷವೆನಿಸಿತ್ತು.
Advertisement
ಕೃತಿಯಲ್ಲಿ ರಾಮನ ಜನ್ಮದ ಬಗ್ಗೆ ತಿಳಿಸಲಾಗಿದೆ. ಶ್ರೀರಾಮನ ಜಾತಕದ ಬಗ್ಗೆ “ಜಗನ್ನಾಯಕನ ಜಾತಕ’ ಎಂಬ ಬಗ್ಗೆ ಮುಂದಿನ ಸಂಪುಟದಲ್ಲಿ ವಿವರಿಸಲಾಗಿದೆ. ಭಾವ ರಾಮಾಯಣ ಜತೆಗೆ ಅಜ್ಞಾತ ರಾಮಾಯಣ, ತತ್ತÌ ರಾಮಾಯಣದ ಬಗ್ಗೆಯೂ ಬರೆಯುವ ಆಕಾಂಕ್ಷೆ ಇದೆ.-ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ,
ಶ್ರೀ ರಾಮಚಂದ್ರಾಪುರ ಮಠ