Advertisement

ತ್ರಿ-ಡಿಯಲ್ಲಿ “ರಾಮಾಯಣ’

01:06 AM Jul 09, 2019 | Sriram |

ಹೊಸದಿಲ್ಲಿ: ಜನಪ್ರಿಯ ಮಹಾಕಾವ್ಯ “ರಾಮಾಯಣ’ ಮತ್ತೂಮ್ಮೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ತೆಲುಗಿನ ಅಲ್ಲು ಅರವಿಂದ್‌ ನಿರ್ಮಾಣ ಸಂಸ್ಥೆ ಹಾಗೂ ಬಾಲಿವುಡ್‌ನ‌ಲ್ಲಿ ಇತ್ತೀಚೆಗೆ ಬಾಗಿಲು ಮುಚ್ಚಿದ “ಫ್ಯಾಂಟಮ್‌’ ಸಂಸ್ಥೆಯ ಸಹ ಮಾಲೀಕರಾಗಿದ್ದ ಮಧು ಮಾಂಟೇನಾ ಹಾಗೂ ಪ್ರೈಂ ಸ್ಟುಡಿಯೋಸ್‌ನ ಸಂಸ್ಥಾಪಕಿ ನಮಿತಾ ಮಲ್ಹೋತ್ರಾ ಅವರು ಜಂಟಿಯಾಗಿ ಹಿಂದಿ, ತೆಲುಗು, ತಮಿಳಿನಲ್ಲಿ ಈ ಸಿನಿಮಾ ನಿರ್ಮಿಸಲಿದ್ದಾರೆ.

Advertisement

ಚಿತ್ರದ ಬಜೆಟ್‌ 500 ಕೋಟಿ ರೂ. ಆಗಿದ್ದು, 3-ಡಿ ತಂತ್ರಜ್ಞಾನದಲ್ಲಿ ಚಿತ್ರೀಕರಣಗೊಳ್ಳಲಿದೆ. “ದಂಗಲ್‌’ ಖ್ಯಾತಿಯ ನಿತೇಶ್‌ ತಿವಾರಿ ಹಾಗೂ “ಮೊಮ್‌’ ಖ್ಯಾತಿಯ ರವಿ ಉದ್ಯಾವರ್‌ ಈ ಚಿತ್ರ ನಿರ್ದೇಶಿಸಲಿದ್ದು, ಮುಂದಿನ ವರ್ಷ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ. ತಾರಾಬಳಗದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next