Advertisement

Ramanagara: ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಕರಕಲು

02:44 PM Aug 18, 2024 | Team Udayavani |

ರಾಮನಗರ: ಮನೆಯಲ್ಲಿ ಬೈಕ್ ಚಾರ್ಜ್ ಗೆ ಹಾಕಿದ್ದ ಸ್ಕೂಟರ್ ಸಂಪೂರ್ಣ ಕರಕಲಾದ ಘಟನೆ ಮಾಗಡಿ ಪಟ್ಟಣದ ಕಲ್ಯಾಗೇಟ್ ನಲ್ಲಿ ಬಳಿ ರವಿವಾರ (ಆ.18) ಬೆಳಿಗ್ಗೆ ನಡೆದಿದೆ.

Advertisement

ಸ್ಥಳೀಯ ನಿವಾಸಿ ಲಕ್ಷ್ಮೀನರಸಿಂಹ ಎಂಬುವರಿಗೆ ಸೇರಿದ ಸ್ಕೂಟರನ್ನು ಮನೆಯೊಳಗೆ ಬೈಕ್ ನಿಲ್ಲಿಸಿ ಚಾರ್ಜ್ ಗೆ ಇರಿಸಿದ್ದರು. ಈ ವೇಳೆ ಸಾರ್ಟ್ ಸರ್ಕ್ಯೂಟ್ ಆಗಿ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕೆನ್ನಾಲಿಗೆಗೆ ಮನೆಯ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ. ಫ್ರಿಜ್, ವಾಷಿಂಗ್ ಮಷಿನ್ ಸೇರಿ ಇತರೆ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ.

ಮಾಗಡಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next