Advertisement
ಜಿಲ್ಲೆಯ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ 15 ಶಾಲೆಗಳ 8ನೇ ತರಗತಿಯ ಒಟ್ಟು 660 ಮಕ್ಕಳನ್ನು ಗುರುತಿಸಿ ಪ್ರತಿ ಶನಿವಾರದಂದು ಪೊಲೀಸ್ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು.
Related Articles
Advertisement
ಅಪರಾಧಗಳ ತಡೆಗೆ ಸಹಕಾರಿ: ಒಳ್ಳೆಯ ಆರೋಗ್ಯ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಅಭಿವೃದ್ಧಿಗೆ ಅನುಕೂಲವಾಗುವಂತೆ ಕಠಿಣ ಕೆಲಸ ಮತ್ತು ವೈಯಕ್ತಿಕ ಸಾಧನೆಗಾಗಿ ಅವರ ಸಾಮರ್ಥ್ಯ ನಿರ್ಮಿಸುವುದು, ಪೊಲೀಸ್ ಮತ್ತು ಇತರ ಕಾನೂನು ಜಾರಿ ಪ್ರಾಧಿಕಾರಿಗಳಾದ ಅರಣ್ಯ, ಸಾರಿಗೆ ಮತ್ತು ಅಬಕಾರಿ ಇಲಾಖೆಗಳು ಅಪರಾಧವನ್ನು ತಡೆಗಟ್ಟುವಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು, ರಸ್ತೆಯ ಸುರಕ್ಷತೆಯನ್ನು ಉತ್ತೇಜಿಸುವುದು ಮತ್ತು ಅಂತರಿಕ ಭದ್ರತೆ ಮತ್ತು ಕೋಪ ನಿರ್ವಹಣೆಯನ್ನು ಸುಧಾರಿಸಲು ಈ ಪೊಲೀಸ್ ಕೆಡೆಟ್ ಕಾರ್ಯಕ್ರಮ ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ತಂಡದ ಕೆಲಸ, ನವೀನ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯ ಕೌಶಲ್ಯಗಳನ್ನು ವೃದ್ಧಿಸುವ ಮೂಲಕ ಯಶಸ್ಸನ್ನು ಸಾಧಿಸಲು ಪ್ರೇರಣೆ ನೀಡುವುದು. ಯುವಜನರಲ್ಲಿನ ಶಕ್ತಿಯನ್ನು ಹೊರತರುವ ಕಾರ್ಯ ಈ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಮಾಡಲಿದೆ.
ಜಾತ್ಯಾತೀತ ದೃಷ್ಠಿಕೋನವನ್ನು ಅಭಿವೃದ್ಧಿಪಡಿಸಲು ಯುವಕರನ್ನು ಪ್ರೇರೇಪಿಸುವಂತೆ ಮಾಡುವುದು, ಇತರ ಮೂಲಭೂತ ಹಕ್ಕುಗಳ ಗೌರವ ಮತ್ತು ಭಾರತದ ಸಂವಿಧಾನದಲ್ಲಿ ಮತ್ತು ಮೂಲಭೂತ ಕರ್ತವ್ಯಗಳನ್ನು ಕೈಗೊಳ್ಳುವ ಇಚ್ಚೆ, ದೇಶ ಭಕ್ತಿಯ ಗುಣಗಳನ್ನು, ಮುಕ್ತ ಮನಸ್ಸು, ಉದಾರತೆ, ಸಾಮಾಜಿಕ ಅಂತರ್ಗತತೆ ಬೆಳೆಸುವ ಕಾರ್ಯವಾಗಲಿದೆ.
ವಿದ್ಯಾರ್ಥಿಗಳ ಆಯ್ಕೆಗೆ ಡೀಸಿ ಸೂಚನೆ: ವಿದ್ಯಾರ್ಥಿ ಪೊಲೀಸ್ ಕೆಡೆಟ್ ಬಗ್ಗೆ ತರಬೇತಿ ವಿಭಾಗದ ಪೊಲೀಸ್ ಕಮಾಂಡೆಂಟ್ ಕುಲದೀಪ್ ಜೈನ್ ವಿವರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ವಿದ್ಯಾರ್ಥಿಗಳಿಗೆ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಉದ್ದೇಶಗಳು ಭಾರತದ ರಾಷ್ಟ್ರೀಯ ಯುವ ನೀತಿಯ ಗುರಿಗಳೊಂದಿಗೆ ಸಮನ್ವಯವಾಗಿದೆ. ಇದು ರಾಷ್ಟ್ರ ನಿರ್ಮಾಣದ ಶ್ರೇಷ್ಟ ಕೆಲಸದಲ್ಲಿ ತೊಡಗಿಕೊಳ್ಳುವ ಯುವಕರನ್ನು ಅನುಸರಿಸುತ್ತದೆ ಎಂದರು.
ಆಯ್ದ 15 ಶಾಲೆಗಳಲ್ಲಿ 44 ಬಾಲಕ, ಬಾಲಕಿಯರನ್ನು ಅಯ್ಕೆ ಮಾಡುವಂತೆ ಡಿಡಿಪಿಐ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟರು. ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಿದೆ ಎಂದರು. ಕರ್ನಾಟಕ ಸೇರಿದಂತೆ ಕೇರಳ, ಗುಜರಾತ್, ಹರಿಯಾಣ ಹಾಗೂ ರಾಜಸ್ಥಾನಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.