ರಾಮನಗರ : ಕೆಲ ದಿನಗಳಿಂದ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಾ, ಎರಡು ಜೀವಗಳನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲಗೊಂಡಿದೆ.
Advertisement
ಕಳೆದ ನಾಲ್ಕು ದಿನಗಳ ಹಿಂದೆ ಕಾಡಾನೆ ಸೆರೆಗೆ ಆಗಮಿಸಿದ ಅಭಿಮನ್ಯು ನೇತೃತ್ವದ 5 ಸಾಕಾನೆಗಳ ತಂಡ ಒಂಟಿ ಸಲಗದ ಸೆರೆಗೆ ಕಾರ್ಯಚರಣೆ ಕೈಗೊಂಡಿದ್ದರೂ ತಪ್ಪಿಸಿಕೊಂಡು ಹೋಗುತ್ತಿದ್ದ ಸಲಗವನ್ನು ಗುರುವಾರ ಬೆಳಿಗ್ಗೆ ತೆಂಗಿನ ಕಲ್ಲು ಅರಣ್ಯ ಪ್ರದೇಶದ ಅರಳಾಳು ಸಂದ್ರ ಕಾಡನಕುಪ್ಪೆ ಗ್ರಾಮದ ಮಧ್ಯಭಾಗದಲ್ಲಿ ಸೆರೆ ಹಿಡಿಯಲಾಗಿದೆ.
ಸೆರೆ ಹಿಡಿದಿರುವ ಕಾಡಾನೆಯನ್ನು ತಾತ್ಕಾಲಿಕ ಕ್ಯಾಂಪ್ ಗೆ ಕರೆತಂದು ರಾತ್ರಿ ಸ್ಥಳಾಂತರ ಕಾರ್ಯ ಕೈಗೊಳ್ಳಲಿದ್ದಾರೆ.