Advertisement

ನಿಗದಿತ ಅವಧಿಯೊಳಗೆ ಮಿಷನ್‌ ಪೂರ್ಣಗೊಳಿಸಿ

05:46 PM Jul 10, 2021 | Team Udayavani |

ರಾಮನಗರ: ಜಲ ಜೀವನ್‌ ಮಿಷನ್‌ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳನ್ನು ನಿಗದಿಪಡಿಸಿರುವ ಸಮಯದೊಳಗೆಪೂರ್ಣ ಗೊಳಿಸುವಂತೆ ಹಾಗೂಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲ  ಪಂಚಾಯ್ತಿ ಸಿಇಒ ಇಕ್ರಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

Advertisement

ಜಿಲ್ಲಾ ಪಂಚಾಯಿತಿ ಭವನದ ಮಿನಿಸಭಾಂಗಣದಲ್ಲಿ ಗ್ರಾಮೀಣ ಕುಡಿಯುವನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್‌ ವಿಷನ್‌ ಪ್ರಗತಿ ಪರಿಶೀಲನಸಭೆಯಲ್ಲಿ ಮಾತನಾಡಿದರು.ತಾಲೂಕುಮಟ್ಟದಲ್ಲಿತಾಪಂಗಳಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ತಾಲೂಕು ಮಟ್ಟದ ಅಧಿಕಾರಿಗಳ ಸಭೆನಡೆಸಿ ತಮ್ಮ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನುಚುರುಕುಗೊಳಿಸಿ ಎಂದರು.

ಕಾಮಗಾರಿ ನಡೆಯುವ ಸಂದರ್ಭದಲ್ಲಿಯಾವುದೇ ಸಮಸ್ಯೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು.ಸಮಸ್ಯೆ ಕಂಡು ಬಂದರೆ ಪ್ರತಿ ವಾರ ನಡೆಯುವ ಜಲ ಜೀವನ್‌ ಮಿಷನ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.ಗ್ರಾಮೀಣ ಭಾಗಗಳಲ್ಲಿ ಯೋಜನೆಯಸದುಪಯೋಗ ಪಡೆದುಕೊಳ್ಳುವಂತೆ ನಾಗರಿಕರಿಗೆತಿಳಿಸಬೇಕಾಗಿದ್ದು,ಗ್ರಾಮಪಂಚಾಯಿತಿಅಧ್ಯಕ್ಷರ ಸಹಕಾರದಲ್ಲಿ ಯೋಜನೆ ಬಗ್ಗೆಅರಿವುಮೂಡಿಸುವಂತೆಸೂಚನೆನೀಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತಾಲೂಕುಮಟ್ಟದಲ್ಲಿ ಯೋಜನೆಯ ನೋಡಲ… ಅಧಿಕಾರಿಗಳಾಗಿ ನೇಮಿಸಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಸಲಹೆಕೊಟ್ಟರು. ಗ್ರಾಮೀಣ ಕುಡಿಯುವ ನೀರುಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕಅಭಿಯಂತರ ಚಂದ್ರಹಾಸ್‌ ಸೇರಿದಂತೆಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next