ರಾಮನಗರ : ಸ್ನೇಹಿತನ ಜೊತೆ ಸಾವನದುರ್ಗ ಚಾರಣಕ್ಕೆ ಹೋದ ವ್ಯಕ್ತಿ ವಾಪಸ್ಸಾಗದೇ ನಾಪತ್ತೆಯಾಗಿರುವ ಘಟನೆ ಕಳೆದ ರವಿವಾರ ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟದಲ್ಲಿ ನಡೆದಿದೆ.
ನಾಪತ್ತೆಯಾದ ಯುವಕನನ್ನು ಉತ್ತರ ಪ್ರದೇಶ ಮೂಲದ ಗಗನ್ ದೀಪ್ ಸಿಂಗ್ (30) ಎನ್ನಲಾಗಿದೆ.
ಭಾನುವಾರ ರಜೆ ಹಿನ್ನೆಲೆ ಸ್ನೇಹಿತನ ಜೊತೆ ಚಾರಣ ಏರಿದ್ದ ಗಗನ್ ದೀಪ್ ಸಿಂಗ್ ಚಾರಣ ಏರಿ ಇಳಿಯಲು ಸರಿಯಾದ ಮಾರ್ಗವಿಲ್ಲದಿರುವುದೇ ಯುವಕನ ನಾಪತ್ತೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಬೆಟ್ಟದ ಮೇಲೆಲ್ಲ ಯುವಕನಿಗಾಗಿ ಹುಡುಕಾಟ ನಡೆಸುತ್ತಿರೋ ಪೊಲೀಸರು, ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿ, ಶ್ವಾನದಳ, ಸ್ಥಳೀಯರು.
ಯುವಕನಿಗಾಗಿ ಸುಮಾರು 100 ಕ್ಕೂ ಹೆಚ್ಚು ಅಧಿಕಾರಿಗಳು, ಸ್ಥಳೀಯರಿಂದ ಹುಡುಕಾಟ. ಡ್ರೋನ್ ಬಳಸಿ ಯುವಕನಿಗಾಗಿ ಹುಡುಕಾಟ ಆದರೂ ಯುವಕನ ಪತ್ತೆಯಾಗಿಲ್ಲ.
ಗಗನ್ ಮೊಬೈಲ್ ಲೊಕೇಷನ್ ಟ್ರಾಪ್ ಮಾಡುತ್ತಿರೋ ಎಫ್‌ಎಸ್‌ಎಲ್ ತಂಡ. ಗಗನ್ ಗಾಗಿ ಸಾವನದುರ್ಗ ಚಾರಣದಲ್ಲಿ ಹುಡುಕಾಡುತ್ತಿರೋ ಕುಟುಂಬ. ಭಾನುವಾರದಿಂದ ಸ್ಥಳದಲ್ಲೇ ಪೊಲೀಸರು, ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿಗಳು ಬೀಡುಬಿಟ್ಟಿದ್ದಾರೆ.
ಘಟನೆ ಸಂಬಂಧ ಮಾಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2023 Recap: ಸ್ವಾಮಿನಾಥನ್, ಸಿಲ್ವೆಸ್ಟರ್ ಸೇರಿ ಭಾರತದ 10 ಮಂದಿ ಗಣ್ಯರು ಅಗಲಿದ ವರ್ಷ