Advertisement
ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ದೊಡ್ಡ ಮಟ್ಟದ ಬೆಂಕಿ ಅನಾಹುತಗಳು ಜಿಲ್ಲೆಯ ಅರಣ್ಯದಲ್ಲಿ ಘಟಿಸಿಲ್ಲ ಎಂಬುದೇ ಸಮಾಧಾನ. ಆದರೂ ಇಲಾಖೆ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಕಳೆದ ವರ್ಷಗಳಲ್ಲಿ ರಾಮನಗರ ವಿಭಾಗದಲ್ಲಿ ಒಟ್ಟು ಸುಮಾರು 5 ಹೆಕ್ಟೇರ್ ನಷ್ಟು ಮಾತ್ರ ಕಾಡು ಬೆಂಕಿಗಾಹುತಿಯಾಗಿದೆ.
Related Articles
ನಂದಿಸುವುದೊಂದೆ ಉಪಾಯ!
Advertisement
ರಾಮನಗರ ಜಿಲ್ಲೆಯಲ್ಲಿ ಹುಲ್ಲು, ತರಗುಗಳಿಂದ ಕೂಡಿದ ಕುರುಚುಲು ಕಾಡಿನ ಪ್ರಮಾಣವೇ ಅಧಿಕವಿದ್ದು, ಹುಲ್ಲು, ತರಗಿಗೆ ಬೆಂಕಿ ಹೊತ್ತಿಕೊಂಡಾಗ ಅವು ನೆಲದಲ್ಲೇ (ಗ್ರೌಂಡ್ ಫೈರ್) ಹರಡುತ್ತಾ ಹೋಗುತ್ತದೆ. ಈ ರೀತಿಯ ಬೆಂಕಿಯನ್ನು ನಂದಿಸಲು ಬೆಂಕಿ ರೇಖೆಗಳು (ಫೈರ್ ಲೈನ್) ಸಹಕಾರಿ. ಇತ್ತೀಚಿನ ದಿನಗಳಲ್ಲಿ ಇಲಾಖೆ ಫೈರ್ ಬ್ಲೋಯೆರ್‌ಗಳನ್ನು ಖರೀದಿಸಿದ್ದು, ಈ ಬ್ಲೋಯೆರ್‌ಗಳು ಗಾಳಿಯನ್ನು ಊದಿ ಬೆಂಕಿ ನಂದಿಸುತ್ತವೆ.
22 ಕಿಮೀ ಫೈರ್ ಲೈನ್ ನಿರ್ಮಾಣ: ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ ಪಕ್ಕ, ಕಾಡಿನೊಳಗಿನ ಕಾಲು ದಾರಿಗಳು, ಬೆಂಕಿ ಸಂಭಾವ್ಯ ಇರುವ ಸ್ಥಳಗಳನ್ನು ಗುರುತಿಸಲಾಗಿರುತ್ತದೆ. ಅಗತ್ಯ ವಿದ್ದಷ್ಟು ಉದ್ಧ ಮತ್ತು ಮೂರು ಮೀಟರ್ ಅಗಲಕ್ಕೆ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಹುಲ್ಲು, ತರಗುಗಿಡಗಳನ್ನು ನಾಶ ಪಡಿಸುತ್ತಾರೆ, ಇದು ಬೆಂಕಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಹರಡುವುದನ್ನು ತಡೆಯುತ್ತದೆ. ರಾಮನಗರ ಜಿಲ್ಲೆಯಲ್ಲಿ ಎಲ್ಲಾ 5 ರೇಂಜ್ ಗಳಲ್ಲೂ ಇಲಾಖೆ ಸುಮಾರು 122 ಕಿಮೀ ಉದ್ದದ ಫೈರ್ ಲೈನ್ ನಿರ್ಮಾಣ ಮಾಡಲು ಆರಂಭಿಸಿದೆ. 60ಕ್ಕೂ ಫೈರ್ ವಾಚರ್ ನಿಯೋಜನೆ: ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿಯನ್ನು ಪತ್ತೆ ಹಚ್ಚಲು ಇಲಾಖೆ 60ಕ್ಕೂ ಹೆಚ್ಚು ಫೈರ್ ವಾಚರ್‌ಗಳನ್ನು ನಿಯೋಜಿಸುತ್ತಿದೆ. ತನ್ನದೇ ಸಿಬ್ಬಂದಿ ಜೊತೆಗೆ ತತ್ಕಾಲಿಕವಾಗಿ ಬೇರೆಯವನ್ನು ನೇಮಿಸಿಕೊಂಡು ನಿಯೋಜಿಸಲಾಗುತ್ತದೆ. ತಲಾ ಗುಂಪಿನಲ್ಲಿ ಮೂವರು ವಾಚರ್‌ಗಳಿದ್ದು, ವಾಚ್ ಟವರ್‌ಗಳು, ಫಾರೆಸ್ಟ್ ಐ ಪಾಯಿಂಟ್‌ಗಳಲ್ಲಿ ಇವರ ನಿಯೋಜನೆಯಾಗುತ್ತದೆ. ಇವರು ತಮ್ಮ ವ್ಯಾಪ್ತಿಯೊಳಗಿನ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡರೆ, ತಕ್ಷಣ ಆ ವಿಚಾರವನ್ನು ತಮ್ಮ ಹಿರಿಯ ಅಧಿಕಾರಿಗಳ ಗಮನ ಸೆಳೆಯುತ್ತಾರೆ. ಬೆಂಕಿ ನಂದಿಸಲು ಕಾರ್ಯ ಪ್ರವೃತ್ತರಾಗುತ್ತಾರೆ.