Advertisement

ಶೆಡ್ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು, ಇಬ್ಬರು ಮಹಿಳೆಯರಿಗೆ ಗಾಯ

08:38 AM Aug 07, 2022 | Team Udayavani |

ರಾಮನಗರ : ಭಾರಿ ಮಳೆಗೆ ಶೆಡ್ ನಲ್ಲಿ ಮಲಗಿದ್ದವರ ಮೇಲೆ ಪಕ್ಕದ ಮನೆಯ ದನದ ಕೊಟ್ಟಿಗೆಯ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಕೂಡ್ಲೂರು ಕ್ರಾಸ್ ಬಳಿಯ ಸೋಲೂರು ಗ್ರಾಮದಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಸಂಭವಿಸಿದೆ.

Advertisement

ನೇಪಾಳ ಮೂಲದ ಫರ್ಬಿನ್(4), ಇಷಿಕಾ (3) ಮೃತಪಟ್ಟ ಮಕ್ಕಳು.

ನೇಪಾಳ ಮೂಲದ ಕುಟುಂಬ ಇಲ್ಲಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಸೋಲೂರು ಗ್ರಾಮದ ಶೆಡ್ ಒಂದರಲ್ಲಿ ವಾಸವಾಗಿದ್ದರು ರಾತ್ರಿ ಮಲಗಿದ ವೇಳೆ ಪಕ್ಕದ ಮನೆಯ ದನದ ಕೊಟ್ಟಿಗೆಯ ಗೋಡೆ ಕುಸಿದು ಇವರ ಶೆಡ್ ಮೇಲೆ ಬಿದ್ದ ಪರಿಣಾಮ ಮಣ್ಣಿನಡಿ ಸಿಲುಕಿ ಇಬ್ಬರು ಪುಟ್ಟ ಕಂದಮ್ಮಗಳು ಸಾವನ್ನಪ್ಪಿವೆ, ಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುದೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ : ಕೊಡಗಿನಲ್ಲಿ ಭಾರೀ ಮಳೆ ; ಜನಜೀವನ ಅಸ್ತವ್ಯಸ್ತ, ರೆಡ್‌ ಅಲರ್ಟ್‌ ವಿಸ್ತರಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next