Advertisement

ಫೆ.2 ರಂದು ರಾಮನಗರ ಮ್ಯಾರಥಾನ್‌

02:41 PM Jan 24, 2020 | Suhan S |

ರಾಮನಗರ: ದಕ್ಷಿಣ ಭಾರತದಲ್ಲಿ ಖ್ಯಾತಿಯಾಗಿರುವ ರಾಮನಗರ ಮ್ಯಾರಥಾನ್‌ 2020 ಇದೇ ಫೆಬ್ರವರಿ 2ರಂದು ಆಯೋಜನೆಯಾಗಿದೆ ಎಂದು ಯಲ್ಲೋ ಆಂಡರ್‌ ರೆಡ್‌ ಫೌಂಡೇಷನ್‌ನ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.

Advertisement

ನಗರದ ಕೆಂಗಲ್‌ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದು 7ನೇ ಬಾರಿಗೆ ಮ್ಯಾರಥಾನ್‌ ಆಯೋಜನೆಯಾಗಿದ್ದು, ದಕ್ಷಿಣ ಭಾರತದಲ್ಲಿ ಗಮನ ಸೆಳೆದಿದೆ ಎಂದರು.

ಪ್ಲಾಸ್ಟಿಕ್‌ ಮುಕ್ತ ಸಮಾಜ: ಅರಣ್ಯ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಿಲ್ಲಿ ಮತ್ತು ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಲ್ಲಿ ಈ ಬಾರಿಯ ಮ್ಯಾರಥಾನ್‌ ನಡೆಯಲಿದೆ. ಮ್ಯಾರಥಾನ್‌ಗೆ ರಾಮನಗರ ಜಿಲ್ಲಾ ಪೊಲೀಸ್‌, ಜಿಲ್ಲಾ ಪಂಚಾಯಿತಿ, ಗೈಲ್‌ ಲಿಮಿಟೆಡ್‌ ಮತ್ತು ಮಹಾರಾಷ್ಟ್ರ ನ್ಯಾಷನಲ್‌ ಗ್ಯಾಸ್‌ ಲಿಮಿಟೆಡ್‌, ಕೆಂಗಲ್‌ ಹುನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ, ರೋಟರಿ ಸಿಲ್ಕ್ ಸಿಟಿ, ಶಾಂತಿ ನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಗ್ರೀನ್‌ ಡೈಮಂಡ್‌ ಸಂಸ್ಥೆ, ಸುಧಾ ಕ್ಲಿನಿಕ್‌, ಇಂಪನಾ ಹಾಸ್ಟಿಟಲ್‌ಗಳ ಸಹಯೋಗದಲ್ಲಿ ಮ್ಯಾರಥಾನ್‌ ಆಯೋಜನೆಯಾಗಿದೆ. ಮ್ಯಾರಥಾನ್‌ ಉದ್ಘಾಟನೆಗೆ ಜಿಪಂ ಸಿಇಒ ಇಕ್ರಂ, ಎಸ್ಪಿ ಅನೂಪ್‌ ಶೆಟ್ಟಿ ಆಗಮಿಸಲಿದ್ದಾರೆ ಎಂದರು.

ಓಟಗಳ ವರ್ಗ ಯಾವುವು?: ಎಂದಿನಂತೆ ಈ ಬಾರಿಯೂ ರೂರಲ್‌ 7 ಕಿಮೀ ಓಟ, ವಿದ್ಯಾರ್ಥಿ 7 ಕಿಮೀ ಓಟ, ಹಿರಿಯರ 7 ಕಿಮೀ ಓಟ, ರಾಕ್‌ 11 ಕಿಮೀ ಓಟ ಮತ್ತು ರೀಡಿಫೈನ್‌ 21.1 ಕಿಮೀ ಓಟ ಆಯೋಜಿಸಲಾಗಿದೆ. ರಾಮನಗರ ಹೊರ ವಲಯದ ಬಸವನಪುರದಲ್ಲಿ ಆರಂಭವಾಗುವ ಮ್ಯಾರಥಾನ್‌ ಓಟ, ವಡೇರಹಳ್ಳಿ, ರಾಂಪುರ ದೊಡ್ಡಿ, ಗೋಪಾಲಪುರ, ದಾಸೇಗೌಡನ ದೊಡ್ಡಿ ಮಾರ್ಗವಾಗಿ ಹುಣಸನಹಳ್ಳಿ ತಲುಪಿ ಮತ್ತೆ ವಾಪಸ್‌ ಅದೇ ಮಾರ್ಗದಲ್ಲಿ ಬಂದು ಬಸವನಪುರದಲ್ಲಿ ಅಂತ್ಯವಾಗಲಿದೆ ಎಂದರು. ಓಟದಲ್ಲಿ ಭಾಗವಹಿಸುವ ಎಲ್ಲರಿಗೂ ಪಾರಿತೋಷಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ವಿವರಿಸಿದರು.

ನೋಂದಣಿ ಹೇಗೆ?: ಆಸಕ್ತರು ರಾಮನಗರದ ಬಿಜಿಎಸ್‌ ಆಸ್ಪತ್ರೆಯ ಬಳಿಯ ಇರುವ ಯಲ್ಲೋ ಆಂಡರ್‌ ರೆಡ್‌ ಸರ್ವೀಸಸ್‌ ಪ್ರೈ.ಲಿ ನಲ್ಲಿ (ಮೊಬೈಲ್‌: 7676775624), ರಾಮನಗರ ಎಂ.ಜಿ.ರಸ್ತೆಯಲ್ಲಿರುವ ಶರ್ವರಿ ಜ್ಯೂಯೆಲರ್ (ಮೊ: 9242108418), ಕೆಂಪೇಗೌಡ ವೃತ್ತದಲ್ಲಿರುವ ಅಜಯ್‌ ಕಮ್ಯುನಿಕೇಷನ್‌ (ಮೊ: 080 27275624) ಇಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಶುಲ್ಕ 400 ರೂ. ಟೀ ಶರ್ಟ್‌, ಬೆಳಗಿನ ಉಪಹಾರ, ಪಾರಿತೋಷಕ, ಪ್ರಮಾಣ ಪತ್ರ ಉಚಿತ ಎಂದು ಅವರು ವಿವರಿಸಿದರು.

Advertisement

ಫೌಂಡೇಷನ್‌ ಎಂಡಿ ಆನಂದ ಶಿವ, ರೋಟರಿ ಸಿಲ್ಕ್ ಸಿಟಿ ನಿಯೋಜಿತ ಅಧ್ಯಕ್ಷ ಎನ್‌.ರವಿಕುಮಾರ್‌, ಕೆಂಗಲ್‌ ಹನುಮಂತಯ್ಯ ನ್ಪೋಟ್ಸ್‌ ಕ್ಲಬ್‌ ಖಜಾಂಚಿ ಸತೀಷ್‌, ನಿರ್ದೇಶಕ ಡಾ.ನಟರಾಜ್‌, ಯುರೋ ಕಿಡ್ಸ್‌ ಮಾಲೀಕ ವಿಶ್ವಾನಂದ ರಾಜೇ ಅರಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next