Advertisement
ಡಾ| ಶ್ರೀಕುಮಾರ್ ಮೆನನ್ ಮಾತನಾಡಿ, ಸ್ವಚ್ಛ ಭಾರತ ಅಭಿಯಾನವು ಜನಾಂದೋಲನವಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್‌ನ ಕಾರ್ಯ ಶ್ಲಾಘನೀಯ. ಈಗ ಯುಜಿಸಿ ಕೂಡ ಸ್ವಚ್ಛತಾ ಅಭಿಯಾನವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಈ ದಿಸೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಯೋಜನೆ ರೂಪಿಸಿರುವುದು ಸ್ವತ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ವೇಗ ದೊರಕಿದೆ ಎಂದರು.
ಡಾ| ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ವಿನೂತನ ಭಾರತವನ್ನು ಕಾಣಬೇಕಾದರೆ ವಿದೇಶಗಳಲ್ಲಿರುವ ಸ್ವಚ್ಛತೆ, ಶಿಸ್ತು, ನಿಯಮ ಪಾಲನೆಗಳು ಪ್ರತಿ ಭಾರತೀಯರಲ್ಲಿ ಮೂಡಬೇಕು. ಹೊರದೇಶಕ್ಕೆ ಹೋದಾಗ ನಿಯಮಗಳನ್ನು ಪಾಲಿಸುವ ನಾವು ಭಾರತಕ್ಕೆ ಬಂದಾಗಲೂ ಅದನ್ನು ಅನುಸರಿಸುವಂತಾದಾಗ ಮಾತ್ರ ಸ್ವತ್ಛ ಭಾರತ ಸಾಕಾರಗೊಳ್ಳುತ್ತದೆ ಎಂದರು. ಈ ಸಂದರ್ಭದಲ್ಲಿ ರಮೇಶ್ ರಾವ್, ಮಸಾ ಹಿರೊ, ನಾಗೇಶ್ ಕೆ., ಪುರುಷೋತ್ತಮ ಪೂಜಾರಿ, ವಿಭಾ ಪ್ರಭು, ಅನಿರುದ್ಧ ನಾಯಕ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. ಆರಂಭದಲ್ಲಿ ಕಾರ್ಯಕರ್ತರನ್ನು ಐದು ತಂಡಗಳಾಗಿ ವಿಂಗಡಿಸಿ ಜವಾಬ್ದಾರಿ ಹಂಚಲಾಯಿತು.
Related Articles
Advertisement
ಡಾ| ಧನೇಶ ಕುಮಾರ್ ಹಾಗೂ ಕಾರ್ಯಕರ್ತರು ಉದ್ಯಾನವನದ ಮುಂಭಾಗದ ಕಾಲುದಾರಿಗಳನ್ನು ಶುಚಿಗೊಳಿಸಿದರು. ಜೆಸಿಬಿ ಯಂತ್ರ ಬಳಸಿಕೊಂಡು ಕಾಲುದಾರಿಯಲ್ಲಿ ಬಿದ್ದುಕೊಂಡಿದ್ದ ದೊಡ್ಡಕಲ್ಲು ಚಪ್ಪಡಿಗಳನ್ನು ತೆಗೆದು, ಬದಿಗೆ ಹಾಕಿ ಮಣ್ಣು ಸಮತಟ್ಟು ಮಾಡಲಾಯಿತು. ಶುಭೋದಯ ಆಳ್ವ ಮಾರ್ಗದರ್ಶನ ನೀಡಿದರು.
ಬ್ಯಾನರ್ ತೆರವುನಗರದಲ್ಲಿರುವ ಬ್ಯಾನರ್‌ಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುವುದು ಹಾಗೂ ವಾಹನ ಸವಾರರಿಗೆ ತೊಂದರೆ ನೀಡುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಎರಡು ತಂಡಗಳನ್ನು ರಚಿಸಿಕೊಂಡು ಬ್ಯಾನರ್ ತೆರವು ಕಾರ್ಯಾಚರಣೆ ನಡೆಸಿದರು. ಮುಖ್ಯವಾಗಿ ಕಂಕನಾಡಿ, ಜ್ಯೋತಿ, ಬಿಜೈ, ಆ್ಯಗ್ನೇಸ್, ಬೆಂದೂರವೆಲ್, ಪಂಪ್ ವೆಲ್, ನಂತೂರು, ಬಲ್ಮಠ ಮೊದಲಾದ ಪ್ರದೇಶಗಳಲ್ಲಿ ಬ್ಯಾನರ್ ತೆರವು ಕಾರ್ಯ ನಡೆಯಿತು. ಬಸ್ ತಂಗುದಾಣದ ಸ್ವಚ್ಛತೆ
ಪ್ರಯಾಣಿಕರು ಪ್ರತಿನಿತ್ಯ ಉಪಯೋಗಿಸುವ ಕದ್ರಿ ಪೊಲೀಸ್ ಠಾಣಾ ಮುಂಭಾಗದ ಬಸ್ ತಂಗುದಾಣವನ್ನು ಈ ಹಿಂದೆ ಸ್ವಚ್ಛ ಮಂಗಳೂರಿನ ಕಾರ್ಯಕರ್ತರು ನವೀಕರಣ ಗೊಳಿಸಿ ದ್ದರು. ಅದೇ ತಂಗುದಾಣವನ್ನು ತೊಳೆದು ಸ್ವಚ್ಛಗೊಳಿಸಲಾಯಿತು. ಜತೆಗೆ ಅದರ ಸುತ್ತಮುತ್ತಲ ಪ್ರದೇಶ ವನ್ನೂ ಸ್ವತ್ಛಗೊಳಿಸಲಾಯಿತು. ಕಾರ್ಯ ಕರ್ತರಾದ ಗಣೇಶ್ ಪ್ರಸಾದ್ ಶೆಟ್ಟಿ, ಕೃಷ್ಣಪ್ರಸಾದ್ ಶೆಟ್ಟಿ, ಚೇತನಾ ಗಡಿಯಾರ್ ಪಾಲ್ಗೊಂಡಿದ್ದರು. ಶ್ರೀಲತಾ ಉಳ್ಳಾಲ, ಉದಯ ಕೆ.ಪಿ., ಪಿ.ಎನ್.ಭಟ್, ಸಂದೀಪ ಕೋಡಿಕಲ್, ಸೌರಜ್ ಮಂಗಳೂರು, ಪ್ರೀತಮ್ ಮುಗಿಲ್, ಜಗನ್ ಕೋಡಿಕಲ್, ವಿಖ್ಯಾತ್ ಸವಿತಾ ಮರ್ನಾಡ, ಕೌಶಿಕ್ ಬೇಕಲ್, ಮಹಮದ್ ಆರೀಫ್ ಮತ್ತಿತರರು ಭಾಗವಹಿಸಿದ್ದರು. ಅಭಿಯಾನಕ್ಕೆ ಎಂಆರ್ ಪಿಎಲ್ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಿದ್ದರು. ಸ್ವಚ್ಛತಾ ಜಾಗೃತಿ
ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿಗಳು ಮಾಜಿ ಕಾರ್ಪೊರೇಟರ್ ಸುರೇಶ್ ಶೆಟ್ಟಿ ಅವರ ಜತೆಯಾಗಿ ಸ್ವಚ್ಛತಾ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕದ್ರಿ ಉದ್ಯಾನವನದಲ್ಲಿದ್ದ ಸಾರ್ವಜನಿಕರನ್ನು ಭೇಟಿಯಾಗಿ ಕರಪತ್ರ ಹಂಚಿ, ಶುಚಿತ್ವದ ಮಹತ್ವ ತಿಳಿಸಿದರು. ಸ್ಥಳೀಯ ವರ್ತಕರನ್ನು ಸಂಪರ್ಕಿಸಿ ಕಸವನ್ನು ಬಿಸಾಡದಂತೆ ವಿನಂತಿಸಿದರು.