Advertisement

ಹಳೆಯಂಗಡಿ : ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ

11:09 AM May 13, 2021 | Team Udayavani |

ಹಳೆಯಂಗಡಿ : ದೇಶದಲ್ಲಿ ಕೋವಿಡ್ ಇರುವ ಕಾರಣ ಈ ಬಾರಿ ರಂಜಾನ್ ಆಚರಣೆ ಸರಳವಾಗಿ ನಡೆಯುತ್ತಿದೆ. ಈದುಲ್ ಫಿತ್ರ್ ಹಬ್ಬದ ವಾತಾವರಣ ಇದ್ದು ಸಂಭ್ರಮ ಸಡಗರ ಇಲ್ಲದೆ ನಡೆಯುತ್ತಿದೆ.

Advertisement

ಕೋವಿಡ್ -19 ಮಹಾಮಾರಿಯ ಆಕ್ರಮಣದಿಂದ ಮುಸ್ಲಿಂ ಬಾಂಧವರು ಮಸೀದಿಗೆ ತೆರಳದೇ ತಮ್ಮ ತಮ್ಮ ಮನೆಯಲ್ಲಿಯೇ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹಳೆಯಂಗಡಿಯ ಇಂದಿರಾನಗರದ ಮುಬಾರಕ್ ಮಂಝಿಲ್ ಮನೆಯಲ್ಲಿ ನಡೆಸಿದ ವಿಶೇಷ ಪ್ರಾರ್ಥನೆಯಂತೆ ಅನೇಕ ಮನೆಯಲ್ಲಿ ಹಬ್ಬದ ಸಂಭ್ರಮವನ್ನು ಸೀಮಿತ ಚೌಕಟ್ಟಿನಲ್ಲಿಯೇ ಆಚರಿಸಿಕೊಂಡರು.  ಇನ್ನು ಪೊಲೀಸರು ಕೂಡ ಮಸೀದಿ ಹಜಾರತ ಗಳಿಗೆ ಸೂಚನೆ ನೀಡಿದ್ದು, ಸಾಮೂಹಿಕ ಪ್ರಾರ್ಥನೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next