Advertisement
2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮೇ 3 ರಂದು ರಂಜಾನ್ ರಜೆ ಪ್ರಕಟಿಸ ಲಾಗಿತ್ತು. ಆದರೆ ಹಬ್ಬವನ್ನು ಮೇ 2 ರಂದು ಆಚರಿಸಲು ಮೂನ್ ಕಮಿಟಿ ತೀರ್ಮಾನಿಸಿರುವುದರಿಂದ ಅದೇ ದಿನ ರಜೆ ಘೋಷಿಸಲಾಗಿದೆ ಎಂದು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ರಾಜ್ಯ ಶಿಷ್ಟಾ ಚಾರ) ಅಧೀನ ಕಾರ್ಯ ದರ್ಶಿ ಅಪೇಕ್ಷಾ ಸತೀಶ್ ಪವಾರ್ ಹೆಸರಲ್ಲಿ ಎ.30ರಂದು ಅಧಿಸೂಚನೆ ಹೊರಡಿಸಲಾಗಿದೆ.
ರಾಜ್ಯದಲ್ಲಿ ಹಬ್ಬ ಯಾವಾಗ ಆಚ ರಿಸ ಲಾಗು ವುದು ಎಂಬ ಬಗ್ಗೆ ಚಂದ್ರ ದರ್ಶನ ಸಮಿತಿ ರವಿವಾರ ಸಂಜೆ ತೀರ್ಮಾನ ಕೈಗೊಳ್ಳುತ್ತದೆ. ಮೇ 2ರಂದು ಹಬ್ಬ ಆಚರಿಸಲು ಸಮಿತಿ ನಿರ್ಧರಿಸಿದೆ ಎಂದು ಸರಕಾರದ ಆದೇಶ ದಲ್ಲಿ ಹೇಳಿರುವುದು ಸರಿ ಯಲ್ಲ ಎಂದು ಕರ್ನಾಟಕ ರಾಜ್ಯ ಚಂದ್ರ ದರ್ಶನ (ಮೂನ್ ಕಮಿಟಿ) ಸಮಿತಿ ಮುಖ್ಯಸ್ಥ ಮೌಲಾನ ಮಕ್ಸೂದ್ ಇಮ್ರಾನ್ ರಷಾದಿ “ಉದಯವಾಣಿ’ಗೆ ತಿಳಿಸಿದ್ದಾರೆ. ಹಬ್ಬ ಆಚರಣೆಗೆ ಚಂದ್ರದರ್ಶನವೇ ಮಾನ ದಂಡವಾಗಿದ್ದು, ರವಿವಾರ ಸಂಜೆ ಸಮಿತಿ ಸಭೆ ನಡೆಯಲಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಾದಿ ಸಹ ಹೇಳಿದ್ದಾರೆ.