Advertisement
ತುಂಗಾ ನದಿಯ ಸುತ್ತ ಮುತ್ತ ದೇವಸ್ಥಾನ, ರಥಬೀದಿ ಹಾಗೂ ಪಟ್ಟಣ ಸಂಪೂರ್ಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಜಾತ್ರೆಗೆ ಬಂದ ಸಾವಿರಾರು ಜನರು ಈ ಮನಮೋಹಕ ದೃಶ್ಯಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಆದರೆ ನದಿಯ ಸಮೀಪ ಬರುತ್ತಿದ್ದಂತೆ ವಿದ್ಯುತ್ ದೀಪಗಳಿಂದ ಕಂಗೊಳಿಸಿ ಜನರನ್ನು ಆಕರ್ಷಸುತ್ತಿರುವ ಅಯೋಧ್ಯೆ ರಾಮಮಂದಿರದ ದೃಶ್ಯವನ್ನು ನೋಡಿ ತಮ್ಮ ಮೊಬೈಲ್ ಗಳಿಂದ ಸೆಲ್ಫಿ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕೆಲವು ಜನರು ಭಕ್ತಿ ಪೂರ್ಣವಾಗಿ ತಮ್ಮ ಪಾದರಕ್ಷೆ ಕಳಚಿಟ್ಟು ಅಯೋದ್ಯೆ ರಾಮಮಂದಿರದ ವಿದ್ಯುತ್ ದೀಪಾಲಂಕಾರದ ದೃಶ್ಯಕ್ಕೆ ಕೈ ಮುಗಿದು ನಮಗೆ ಈ ದೃಶ್ಯ ಹತ್ತಿರದಿಂದ ನೋಡಲು ತೀರ್ಥಹಳ್ಳಿಯಲ್ಲಿ ಅದೃಷ್ಟ , ಮತ್ತು ಸೌಭಾಗ್ಯ ಸಿಕ್ಕಿದೆಯಲ್ಲ ಎಂಬ ಭಾವನೆಯಲ್ಲಿ ಸಂತಸದಿಂದ ಪಾವನರಾಗುತ್ತಿದ್ದಾರೆ.
ಕೊನೆಗೆ ಹೊಳೆದಿದ್ದೆ ಈ ಅಯೋಧ್ಯೆ ರಾಮಮಂದಿರ. ಅಯೋಧ್ಯೆ ರಾಮಮಂದಿರ ತಯಾರಿ ಮಾಡುವುದು ಸುಲಭವದ ಮಾತಲ್ಲ. ಮರಳಿನ ಮೇಲೆ ಕಂಬ ಹುಗಿಯಬೇಕು ಬೇಕು. ಮರಳಿನ ದಿಬ್ಬದಲ್ಲಿ ಅಡಿಕೆ ಮರದ ಕಂಬ ಹುಗಿಯುವುದು ತುಂಬಾ ಕಷ್ಟದ ಕೆಲಸ.ಹಾಗೆಯೇ ಕುರುವಳ್ಳಿ ಪೆಂಡಾಲ್ ಹಿಂಬಾಗದ ವರೆಗೆ 40ರಿಂದ50 ಅಡಿ ಉದ್ದುದ್ದ ಇರುವ ಅಡಿಕೆ ಮರ ರಸ್ತೆಯಲ್ಲಿ ತರುವುದು ಅಷ್ಟೇ ಕಷ್ಟ.ಇದನ್ನು ಶಿವರಾಜಪುರ ಸಮೀಪದಿಂದ 40 ರಿಂದ 50 ಅಡಿ ಉದ್ದದ ಅಡಿಕೆ ಮರವನ್ನು ತಂದು ಸುಮಾರು 300 ಸ್ಲಾಬ್ ಹಗ್ಗ, 25 ಕೆಜಿ ಚಳ್ಳಾದುರಿ ದಾರ ( ಗೋಣಿ ಚೀಲ ಹೊಲಿಯುವ ದಾರ ) ಹಾಗೂ ಇನ್ನಿತರ ಸಾಮಗ್ರಿಗಳೊಂದಿದೆ 15 ದಿನಗಳಿಂದ ಹಗಲು ರಾತ್ರಿ ಕೆಲಸ ಮಾಡಿ ಈ ಅದ್ಭುತವಾದ ಅಯೋಧ್ಯೆ ರಾಮಮಂದಿರ ಸೃಷ್ಟಿಸಿ ಅದರ ತುತ್ತ ತುದಿಯಲ್ಲಿ ಜೈ ಶ್ರೀ ರಾಮ್ ಎಂಬ ಬಾವುಟ ರಾಟೆ ಹಾಕಿ ಏರಿಸಿದ್ದಾರೆ. ಇದು ಅದ್ಭುತವಾಗಿ ಕಾಣಿಸುವುದರ ಜೊತೆಗೆ ಜನರನ್ನು ಆಕರ್ಷಿಸಿಸುವಂತೆ ಮಾಡಿದ್ದಾರೆ.
Related Articles
Advertisement
ಈ ತಯಾರಿ ಕಾರ್ಯದಲ್ಲಿ ರಾಘು, ಜಬಿ, ಶಮಿರ್, ಜೇಮ್ಸ್, ಸಮೀರ್ ಆಸೀಫ್ ಮತ್ತು ಸಂಗಡಿಗರಿಂದ ಈ ವಿದ್ಯುತ್ ದೀಪಾಲಂಕಾರದ ಅಯೋಧ್ಯೆ ರಾಮಮಂದಿರ ಸೃಷ್ಟಿಯಾಗಿದೆ.
ಇದನ್ನೂ ಓದಿ: Shimoga; ಕುಮಾರಸ್ವಾಮಿ ಹೇಳುವುದೆಲ್ಲಾ ಸುಳ್ಳು ಮಾತ್ರ…: ಸಿದ್ದರಾಮಯ್ಯ ಟೀಕೆ