Advertisement

ರಾಮ ಹಿಂದೂಗಳಿಗೆ ಮಾತ್ರವಲ್ಲ ಎಲ್ಲರಿಗೂ ಸೇರಿದವನು : ಫಾರೂಕ್ ಅಬ್ದುಲ್ಲಾ

04:15 PM Nov 20, 2022 | Team Udayavani |

ಅಖ್ನೂರ್ : ಭಗವಾನ್ ರಾಮ ಹಿಂದೂ ಧರ್ಮದ ಜನರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಸೇರಿದವನಾಗಿದ್ದಾನೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ,’ಯಾವುದೇ ಧರ್ಮವು ಕೆಟ್ಟದ್ದಲ್ಲ, ಅದರ ಮನುಷ್ಯರು ಭ್ರಷ್ಟರಾಗಿದ್ದಾರೆ, ಧರ್ಮವಲ್ಲ… ಅವರು ಚುನಾವಣೆಯ ಸಮಯದಲ್ಲಿ ‘ಹಿಂದೂ ಖತ್ರೇ ಮೈ ಹೈ’ ಎನ್ನುವುದನ್ನು ಹೆಚ್ಚು ಬಳಸುತ್ತಾರೆ, ಆದರೆ ಅದಕ್ಕೆ ಬಲಿಯಾಗಬೇಡಿ ಎಂದು ನಾನು ವಿನಂತಿಸುತ್ತೇನೆ’ ಎಂದರು.

ನಮಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 50,000 ಉದ್ಯೋಗಗಳ ಭರವಸೆ ನೀಡಲಾಯಿತು, ಅವರು ಎಲ್ಲಿದ್ದಾರೆ? ನಮ್ಮ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬಂದಿ ಮತ್ತು ನಮ್ಮ ಮಕ್ಕಳು ಎಲ್ಲರೂ ನಿರುದ್ಯೋಗಿಗಳಾಗಿದ್ದಾರೆ. ಇದನ್ನು ರಾಜ್ಯಪಾಲರಿಂದ ಮಾಡಲು ಸಾಧ್ಯವಿಲ್ಲ, ನೀವು ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಚುನಾವಣೆ ನಡೆಯುವುದು ಅಗತ್ಯವಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next