ನವದೆಹಲಿ: ನೇಪಾಳದಿಂದ ಉತ್ತರಪ್ರದೇಶದ ಅಯೋಧ್ಯೆಗೆ ಎರಡು ಅತ್ಯಪರೂಪದ ಸಾಲಿಗ್ರಾಮ ಶಿಲೆಗಳು ಗುರುವಾರ (ಫೆ.02) ಬಂದು ತಲುಪಿದ್ದು, ಈ ಶಿಲೆಯಿಂದ ಭಗವಾನ್ ಶ್ರೀರಾಮ ಮತ್ತು ಜಾನಕಿ ದೇವಿಯ ವಿಗ್ರಹ ಕೆತ್ತಲಾಗುವುದು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:‘ಪ್ರಮುಖ ಪಾತ್ರಕ್ಕಾಗಿ…. ‘: ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಯನತಾರಾ
ಅತ್ಯಪರೂಪದ ಸಾಲಿಗ್ರಾಮ ಶಿಲೆಯನ್ನು ನೇಪಾಳದಿಂದ ವಿಶ್ವಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ಅವರ ನೇತೃತ್ವದಲ್ಲಿ ಬೃಹತ್ ಟ್ರಕ್ ನಲ್ಲಿ ಅಯೋಧ್ಯೆಗೆ ತರಲಾಯ್ತು ಎಂದು ವರದಿ ತಿಳಿಸಿದೆ.
ನೇಪಾಳದ ಮುಸ್ತಾಂಗ್ ಜಿಲ್ಲೆಯ ಕಾಳಿ ಗಂಡಕಿ ನದಿಯಲ್ಲಿ ಮಾತ್ರ ಈ ಸಾಲಿಗ್ರಾಮ ಶಿಲೆ ಲಭ್ಯವಿದ್ದು, ಇವುಗಳನ್ನು ಸೀತಾಮಾತೆ ಜನ್ಮಸ್ಥಳವಾದ ಜಾನಕಿಪುರದಿಂದ ಅಯೋಧ್ಯೆಗೆ ಎರಡು ಟ್ರಕ್ ಗಳ ಮೂಲಕ ತರಲಾಗಿತ್ತು.
Related Articles
ಇದು ಸುಮಾರು 60 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಶಿಲೆ ಎನ್ನಲಾಗಿದ್ದು, ಇದರಲ್ಲಿ ಒಂದು ಸಾಲಿಗ್ರಾಮ ಶಿಲೆ 26 ಟನ್ ಗಳಷ್ಟು ಭಾರವಿದ್ದು, ಮತ್ತೊಂದು ಶಿಲೆ 14 ಟನ್ ಗಳಷ್ಟು ಭಾರ ಇದ್ದಿರುವುದಾಗಿ ವರದಿ ವಿವರಿಸಿದೆ.
ಈ ಬೃಹತ್ ಸಾಲಿಗ್ರಾಮ ಶಿಲೆಯಲ್ಲಿ ಭಗವಾನ್ ಶ್ರೀರಾಮನ ಬಾಲ್ಯದ ರೂಪದ ವಿಗ್ರಹವನ್ನು ಕೆತ್ತಿ ಅಯೋಧ್ಯೆ ಶ್ರೀರಾಮಮಂದಿರ ಗರ್ಭಗುಡಿಯಲ್ಲಿ ಇರಿಸಲಾಗುವುದು. ಈ ವಿಗ್ರಹ 2024ರ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಸಿದ್ಧಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.