Advertisement

ʼರಾಮ್‌ ಸೇತುʼ ಉಳಿವಿಗೆ ರೋಚಕ ಸಫಾರಿ ಹೊರಟ ಅಕ್ಷಯ್:‌ ಟೀಸರ್‌, ರಿಲೀಸ್‌ ಡೇಟ್‌ ಔಟ್

01:06 PM Sep 26, 2022 | Team Udayavani |

ಮುಂಬಯಿ: ಅಕ್ಷಯ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ʼರಾಮ್‌ ಸೇತುʼ ಸಿನಿಮಾದ ಅಧಿಕೃತ ಟೀಸರ್‌ ಸೋಮವಾರ ( ಸೆ.26 ರಂದು) ರಿಲೀಸ್‌ ಆಗಿದೆ.

Advertisement

ಅಕ್ಷಯ್‌ ಕುಮಾರ್‌ ಗಡ್ಡ, ಕೂದಲು, ಕನ್ನಡಕ ಹಾಕಿರುವ ಪುರಾತತ್ವಶಾಸ್ತ್ರಜ್ಞನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼರಾಮ ಸೇತುʼವನ್ನು ಅನ್ವೇಷಿಸುವ ಹಾಗೂ ಉಳಿಸುವ ಹಾದಿಯನ್ನು ಅಡ್ವೆಂಚರ್ ಸಫಾರಿಯ ಹಾಗೆ ಟೀಸರ್‌ ನಲ್ಲಿ ತೋರಿಸಲಾಗಿದೆ.

ಅಂಡರ್‌ ವಾಟರ್‌ ಹಾಗೂ ಐರಾನ್‌ ಮ್ಯಾನ್‌ ಹಾಗಿನ ಸೂಟ್‌ ಧರಿಸಿ ಅಕ್ಷಯ್‌ ಕುಮಾರ್‌ ಇಲ್ಲಿ ʼರಾಮ್ ಸೇತುʼ ಹುಡುಕಲು ಹೊರಟಿದ್ದಾರೆ. ಜಾಕ್ವೆಲಿನ್ ಹಾಗೂ ಇತರ ಪಾತ್ರದ ಪರಿಚಯವನ್ನು ಪುಟ್ಟ ಟೀಸರ್‌ ನಲ್ಲಿ ತೋರಿಸಲಾಗಿದೆ. ಸಾಹಸಮಯ ದೃಶ್ಯ ಹಾಗೂ ಒಂದು ಅದ್ಭುತ ಜರ್ನಿಯ ಝಲಕ್‌ ಟೀಸರ್‌ ನಲ್ಲಿದೆ.

ಅಭಿಷೇಕ್‌ ಶರ್ಮಾ ಚಿತ್ರವನನ್ನು ನಿರ್ದೇಶನ ಮಾಡಿದ್ದು, ಟೀಸರ್‌ ನಲ್ಲಿ ಚಿತ್ರದ ರಿಲೀಸ್‌ ಡೇಟ್‌ ರಿವೀಲ್‌ ಮಾಡಲಾಗಿದೆ. ಅಕ್ಟೋಬರ್‌ 25 ರಂದು ಸಿನಿಮಾ ವಿಶ್ವದೆಲ್ಲೆಡೆ ತೆರೆಗೆ ಬರಲಿದೆ.

ಅಕ್ಷಯ್‌ ಕುಮಾರ್‌, ಜಾಕ್ವೆಲಿನ್‌, ನುಶ್ರತ್ ಭರುಚಾ, ಸತ್ಯದೇವ್ ಕಾಂಚರಣ ಮುಂತಾದ ಕಲಾವಿದರು ನಟಿಸಿದ್ದಾರೆ.ಅಂದ ಹಾಗೆ ಅಜಯ್‌ ದೇವಗನ್‌ ಅವರ ʼಥ್ಯಾಂಕ್‌ ಗಾಡ್‌ʼ ಚಿತ್ರ ಅಕ್ಟೋಬರ್‌ 24 ರಂದು ರಿಲೀಸ್‌ ಆಗಲಿದೆ. ಬಾಲಿವುಡ್‌ ನಲ್ಲಿ ಎರಡು ದೊಡ್ಡ ಚಿತ್ರಗಳ ನಡುವೆ ಪೈಪೋಟಿ ನಡೆಯುವ ಸಾಧ್ಯತೆಯಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next