ಮುಂಬಯಿ: ರಾಮರಾಜ ಕ್ಷತ್ರಿಯ ಮುಂಬಯಿ ಇದರ ವತಿ ಯಿಂದ ವಾರ್ಷಿಕ ಗಣೇಶೋತ್ಸವ ಸಂಭ್ರಮವು ಸಾಕಿನಾಕಾದ ಕಾವೇರಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಚೇರಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಘದ ಅಧ್ಯಕ್ಷ ಪೂರ್ಣಾನಂದ ಶೇರಿಗಾರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮುಂಜಾನೆಯಿಂದ ಗಣಪತಿ ಪ್ರತಿಷ್ಠಾಪನೆ, ನಂತರ ಸಂಘದ ಕಾರ್ಯದರ್ಶಿ ರತ್ನಾಕರ ಬಟ್ವಾಡಿ ಮತ್ತು ರೂಪಾ ಬಂಟ್ವಾಡಿ ದಂಪತಿಯ ಯಜಮಾನತ್ವದಲ್ಲಿ ಗಣಹೋಮ ನೆರವೇರಿತು. ಶ್ರೀ ಸತ್ಯ ನಾರಾಯಣ ಪೂಜೆಯನ್ನು ಶೇಷಯ್ಯ ಕೋತ್ವಾಲ್ ಮತ್ತು ಸವಿತಾ ಕೋತ್ವಾಲ್ ದಂಪತಿ ನೆರವೇರಿಸಿದರು. ಪೂಜಾ ವಿಧಿ-ವಿಧಾನಗಳನ್ನು ಮಧುಸೂದನ್ ಭಟ್ ನೆರವೇರಿಸಿದರು. ಅನಂತರ ಅನ್ನಸಂತರ್ಪಣೆ ನೇರವೇರಿತು.
ಇದೇ ಸಂದರ್ಭದಲ್ಲಿ ನೆರವೇರಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ರಾಧಾಕೃಷ್ಣ ಯು., ಲಕ್ಷ್ಮೀಶ ಹವಾಲ್ದಾರ್ ಅವರನ್ನು ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಿ. ಗಣಪತಿ, ದೇವರಾಯ ಎಂ. ಶೇರಿಗಾರ್. ಶಂಕರ ಮುಧ್ದೋಡಿ, ಪ್ರಕಾಶ ಭಟ್. ದಯಾನಂದ ಜಿ. ಶೇರೆಗಾರ್, ಡಾ| ದೇವದಾಸ್, ಶ್ರೀನಿವಾಸ ಕೆ., ವೆಂಕಟೇಶ್ ಬಿಜೂರು, ಕೆ. ವಿ. ಹೆಗ್ಡೆ, ಶುಭಾ ವಿ. ರಾವ್, ವಿಪುಲ್ ಎಸ್. ನಾಯಕ್, ರಾಜಶೇಖರ ಹೆಗ್ಡೆ, ಸತೀಶ್ ಕಳೂರು, ಸಂಘದ ಉಪಾಧ್ಯಕ್ಷ ವಿಶ್ವನಾಥ ಎಂ. ಶೇರೆಗಾರ್, ಕೋಶಾಧಿಕಾರಿ ಆರ್. ಕೆ. ದಿನೇಶ್, ಕೆ. ವಿಶ್ವನಾಥ ಶೇರೆಗಾರ್, ಪಿ. ಸುಧೀರ್ ಶೇರೆಗಾರ್, ಜಿ. ದಿನೇಶ್ ಶೇರೆಗಾರ್, ಅಣ್ಣಯ್ಯ ಶೇರೆಗಾರ್, ನಾಗರಾಜ ಆರ್. ಶೇರೆಗಾರ್, ವಾಸುದೇವ ಶೇರೆಗಾರ್, ಅನೂಪ ಕುಂದಾಪುರ, ಕಿರಣ್ ಆರ್. ಶೇರೆಗಾರ್, ಸಂತೋಷ್ ಶೇರೆಗಾರ್, ಸುರೇಂದ್ರ ಆರ್. ಶೇರೆಗಾರ್ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು. ದ್ವಿತೀಯ ದಿನ ಸಂಜೆ ಮೆರವಣಿಗೆ ಮೂಲಕ ಮಹಾಗಣಪತಿಯನ್ನು ವಿಸರ್ಜಿಸಲಾಯಿತು. ಸಮಾಜ ಬಾಂಧವರು, ಸದಸ್ಯ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆ ಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.