Advertisement

‘ಡಬಲ್‌ ಇಸ್ಮಾರ್ಟ್‌’ ಹಿಂದೆ ಪುರಿ ಜಗನ್ನಾಥ್

04:36 PM May 15, 2023 | Team Udayavani |

ಉಸ್ತಾದ್‌ ರಾಮ್‌ ಪೋತಿನೇನಿ ಹಾಗೂ ನಿರ್ದೇಶಕ ಪುರಿ ಜಗನ್ನಾಥ್‌ ಮತ್ತೂಮ್ಮೆ ಒಂದಾಗಿದ್ದಾರೆ. ಇಸ್ಮಾರ್ಟ್‌ ಶಂಕರ್‌ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಡೆಡ್ಲಿ ಕಾಂಬಿನೇಷನ್‌ ನಾಲ್ಕು ವರ್ಷದ ಬಳಿಕ ಸೀಕ್ವೆಲ್‌ಗೆ ಕೈ ಹಾಕಿದ್ದಾರೆ. ಚಿತ್ರದ ಟೈಟಲ್‌ ಹಾಗೂ ರಿಲೀಸ್‌ ಡೇಟ್‌ ಅನ್ನು ತಂಡ ಅನೌನ್ಸ್‌ ಮಾಡಿದೆ. ಪುರಿ ಜಗನ್ನಾಥ್‌ ಈ ಚಿತ್ರಕ್ಕೆ ಡಬಲ್‌ ಇಸ್ಮಾರ್ಟ್‌ ಎಂಬ ಶೀರ್ಷಿಕೆ ಇಟ್ಟಿದ್ದಾರೆ. 2024 ಮಾರ್ಚ್‌ 8 ರಂದು ಶಿವರಾತ್ರಿ ಹಬ್ಬಕ್ಕೆ ಈ ಚಿತ್ರ ತೆರೆಗೆ ಬರಲಿದೆ.

Advertisement

ಪುರಿ ಜಗನ್ನಾಥ್‌ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್‌ ಇಸ್ಮಾರ್ಟ್‌ ಸಿನಿಮಾವನ್ನು ಪುರಿ ಕನೆಕ್ಟ್$Õ ನಡಿ ಚಾರ್ಮಿ ಕೌರ್‌ ಹಾಗೂ ಪುರಿ ಜಗನ್ನಾಥ್‌ ನಿರ್ಮಿಸುತ್ತಿದ್ದಾರೆ. ಲೈಗರ್‌ ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ.

ಡಬಲ್‌ ಇಸ್ಮಾರ್ಟ್‌ ಪೋಸ್ಟರ್‌ನಲ್ಲಿ ರಾಮ್‌ ಪೋತಿನೇನಿ ರಕ್ತದ ಗುರುತುಗಳ ತ್ರಿಶೂಲ್‌ ಹಿಡಿದು ಮಾಸ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next