ಇತ್ತೀಚೆಗಷ್ಟೇ ಆಸ್ಕರ್‌ಗೆ ಮುತ್ತಿಕ್ಕಿದ್ದ ಆರ್‌ಆರ್‌ಆರ್ ಸಿನಿಮಾದ ಗೆಲುವನ್ನು ವಿಶ್ವಾದ್ಯಂತ ಅಭಮಾನಿಗಳು ವಿವಿಧ ರೀತಯಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಸಿನಿಮಾದ ನಾಯಕ ನಟ ರಾಮ್‌ಚರಣ್ ಆಸ್ಕರ್ ಅವಾರ್ಡ್ಸ್ ನಿಂದ ಹಿಂದಿರುಗಿದ್ದು, ಹೊಸ ಸಿನಿಮಾ ಆರ್‌ಸಿ15ಸೆಟ್‌ನಲ್ಲಿಯೂ ರಾಮ್‌ಚರಣ್‌ಗೆ ಭಾರೀ ಸ್ವಾಗತ ಸಿಕ್ಕಿದೆ.
ಖ್ಯಾತ ನೃತ್ಯ ಸಂಯೋಜಕ, ನಟ ಪ್ರಭುದೇವ ಹಾಗೂ ಆರ್‌ಸಿ15 ಸಿನಿಮಾದ ಇಡೀ ತಂಡ ನಾಟು ಸ್ಟೆಪ್ ಮೂಲಕವೇ, ರಾಮ್ ಚರಣ್‌ಗೆ ಅಭಿನಂದಿಸಿದ್ದಾರೆ.
ಶೂಟಿಂಗ್‌ಗಾಗಿ ಸಿನಿಮಾದ ಸೆಟ್‌ಗೆ ತೆರಳಿದ ರಾಮ್ ಚರಣ್‌ಗೆ ದೊಡ್ಡ ಹೂವಿನ ಹಾರ ಹಾಕಿ ಸ್ವಾಗತಿಸಿದ್ದಾರೆ.
ವಿಡಿಯೋವನ್ನು ರಾಮ್‌ಚರಣ್ ಜಾಲತಾಣದಲ್ಲಿ ಹಂಚಿಕೊಂಡು, ಧನ್ಯವಾದ ತಿಳಿಸಿದ್ದು, ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.
Related Articles