Advertisement

ಕಳಂಜಿ ಮಹಿಳೆಯರಿಂದ ಕಾಲ್ನಡಿಗೆ ಜಾಥಾ

12:42 PM Feb 09, 2021 | Team Udayavani |

ನೆಲಮಂಗಲ: ಸಮಾಜದಲ್ಲಿ ಮಹಿಳೆಯರು ಸದೃಢ ಜೀವನ ನಡೆಸಲು ಮೊದಲು ಆರೋಗ್ಯವಾಗಿರಬೇಕು ಎಂದು ಕ್ಯಾನ್ಸರ್‌ ಫೌಂಡೇಷನ್‌ ಮುಖ್ಯಸ್ಥೆ ಕಮಲೇಶ್ವರಿ ಸಲಹೆ ನೀಡಿದರು.

Advertisement

ನಗರದ ಬಸವಣ್ಣದೇವರದಲ್ಲಿ ಧಾನ್‌ ಫೌಂಡೇಷನ್‌ ಸಂಸ್ಥೆ ಆರೋಗ್ಯ ಮತ್ತು ಪೌಷ್ಟಿಕಾಂಶ ಭದ್ರತೆ ಉದ್ದೇಶವನ್ನಿಟ್ಟುಕೊಂಡು ಆಯೋಜಿಸಿದ್ದ ವಾಕಥಾನ್‌-2021 ಕಾಲ್ನಡಿಗೆ ಜಾಥಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

ಒಂದು ಕುಟುಂಬದ ನಿರ್ವಹಣೆ ಸಂಪೂರ್ಣ ಜವಾಬ್ದಾರಿ ಮಹಿಳೆಯರು ವಹಿಸಿಕೊಳ್ಳಬೇಕು. ಮೊದಲ ತನ್ನ ಆರೋಗ್ಯ ಕಾಪಾಡಿಕೊಂಡು ನಂತರ ಕುಟುಂಬದ ಆರೋಗ್ಯ ಕಾಪಾಡುವ ಮೂಲಕ ಜಾಗೃತಿ ವಹಿಸಬೇಕು ಎಂದರು.

ಯೋಜನೆ ಸದ್ಭಳಕೆ ಮಾಡಿಕೊಳ್ಳಿ: ಎಸ್‌ ಬಿಐ ಬ್ಯಾಂಕ್‌ ನೆಲ ಮಂಗಲ ಶಾಖೆ ವ್ಯವಸ್ಥಾಪಕಿ ರಾಗಪ್ರಿಯಾ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ಬ್ಯಾಂಕ್‌ನಲ್ಲಿ ಖಾತೆ ತೆರೆದು ವ್ಯವಹರಿಸುವಂತಾಗಬೇಕು. ಸಂಘಗಳ ಮೂಲ ಕ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಪಡೆದ ಸಾಲವನ್ನು ದುಡಿಮೆ ಬಂಡವಾಳವನ್ನಾಗಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಎಸ್‌ಬಿಐನಲ್ಲಿ ಹಾಗೂ ಸರ್ಕಾರದ  ಎಲ್ಲ ಯೋಜನೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಜಾಥಾ: ಧಾನ್‌ ಫೌಂಡೇಷನ್‌ ರಾಮನಗರ ವಲಯದ 500ಕ್ಕೂ ಹೆಚ್ಚು ಕಳಂಜಿಯಂ ಸ್ವಸಹಾಯ ಸಂಘದ

Advertisement

ಮಹಿಳಾ ಸದಸ್ಯರಿಂದ ನೆಲಮಂಗಲಮಧುರೈ ರಸ್ತೆಯಲ್ಲಿರುವ ಕವಾಡಿ ಮಠದಿಂದ ಆರಂಭವಾದ ಕಾಲ್ನಡಿಗೆ ಜಾಥಾ ಪೂರ್ಣ ಕುಂಭ ಕಳಶ, ಡೊಳ್ಳು ಕುಣಿತದೊಂದಿಗೆ ಹೊರಟು ನೆಲಮಂಗಲ ಬಸ್‌ ನಿಲ್ದಾಣದ ಮಾರ್ಗವಾಗಿ ತೆರಳಿ ಬಸವಣ್ಣದೇವರ ಮಠದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮ ತಲುಪಿತು.

ಇದನ್ನೂ ಓದಿ :ಮಾವು ಉತ್ತಮ ಇಳುವರಿ ನಿರೀಕ್ಷೆ

ಬಹುಮಾನ ವಿತರಣೆ: ವಾಕಥಾನ್‌ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿದ್ದ 20ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ್ದ ಎಲ್ಲಾ ಮಹಿಳಾ ಸದಸ್ಯರಿಗೂ ಸಸಿಗಳನ್ನು ವಿತರಿಸಲಾಯಿತು.

ಧಾನ್‌ ಫೌಂಡೇಷನ್‌ ರಾಮನಗರ ವಲಯ ಸಂಯೋಜಕಿ ನಾಗರತ್ನ, ಸಂಯೋಜಕಿ ನಾಗರತ್ನ, ಸಿಬ್ಬಂದಿರಾಘವೇಂದ್ರ, ಮೋಹನ್‌ಕುಮಾರ್‌, ರೇಣುಕಪ್ರಸಾದ್‌, ಗಿರೀಶ್‌, ನಯನಶ್ರೀ ದೊಡ್ಡಬಳ್ಳಾಪುರ,  ನೆಲಮಂಗಲ, ಕುದೂರು, ಮಾಗಡಿ, ರಾಮನಗರ, ಕನಕಪುರ, ಕೋಡಿಹಳ್ಳಿ ಒಕ್ಕೂಟಗಳ ನಿರ್ದೇಶಕಿಯರು, ಸಂಘದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next