Advertisement

Bollywood; ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಮದುವೆ ಡೇಟ್ ಫಿಕ್ಸ್

05:33 PM Feb 10, 2024 | Team Udayavani |

ಪಣಜಿ: ಸದ್ಯ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇಬ್ಬರೂ ಫೆಬ್ರವರಿ 21 ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆಯ ಬಗ್ಗೆ ಒಂದು ದೊಡ್ಡ ಅಪ್‍ಡೇಟ್ ಹೊರಬಿದ್ದಿದ್ದು, ಇಬ್ಬರೂ ಗೋವಾದಲ್ಲಿ ಮದುವೆಯಾಗಲು ಕಾರಣವನ್ನು ನೀಡಲಾಗಿದೆ.

Advertisement

ಇವರಿಬ್ಬರೂ ಗೋವಾದಲ್ಲಿ ಮದುವೆಯಾಗಲಿರುವ ಕಾರಣ ಈ ಸ್ಥಳವು ಅವರಿಗೆ ವಿಶೇಷವಾಗಿದೆ. ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಮದುವೆಯಾಗಲು ದೊಡ್ಡ ಕಾರಣವೆಂದರೆ ಸುಂದರವಾದ ಸ್ಥಳವಲ್ಲ, ಆದರೆ ಅವರ ಪ್ರೇಮಕಥೆ ಗೋವಾದಲ್ಲಿಯೇ ಪ್ರಾರಂಭವಾದ ಕಾರಣ ಗೋವಾ ಅವರಿಗೆ ತುಂಬಾ ವಿಶೇಷವಾಗಿದೆ.

ರಾಕುಲ್ ಮತ್ತು ಜಾಕಿ ವಿದೇಶದಲ್ಲಿ ಮದುವೆಯಾಗಲು ಸಿದ್ಧತೆ ನಡಸಿಕೊಂಡಿದ್ದರು, ಆರು ತಿಂಗಳ ಹಿಂದೆಯೇ ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದಾಗ್ಯೂ, ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೆಡ್ ಇನ್ ಇಂಡಿಯಾ ಮನವಿಯ ನಂತರ, ಇಬ್ಬರೂ ಭಾರತದಲ್ಲಿ ಮದುವೆಯಾಗಲು ನಿರ್ಧರಿಸಿದರು.

ಫೆಬ್ರವರಿ 19 ಮತ್ತು 20 ರಂದು ಗೋವಾದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿವೆ. ಇದಾದ ನಂತರ ಫೆಬ್ರವರಿ 21 ರಂದು ಜಾಕಿ ಜೊತೆ ರಾಕುಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮೂಲಗಳ ಪ್ರಕಾರ, ಇಬ್ಬರೂ ಮದುವೆ ಮತ್ತು ಕಾರ್ಯಕ್ರಮವನ್ನು ಖಾಸಗಿಯಾಗಿಡಲು ಬಯಸುತ್ತಾರೆ. ರಾಕುಲ್ ಮತ್ತು ಜಾಕಿ ಸುಮಾರು 2 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.

Advertisement

2022 ರಲ್ಲಿ ಜಾಕಿ ಹುಟ್ಟುಹಬ್ಬದಂದು ರೊಮ್ಯಾಂಟಿಕ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ರಾಕುಲ್ ಅವರೊಂದಿಗಿನ ಸಂಬಂಧವನ್ನು ಒಪ್ಪಿಕೊಂಡರು.

 

Advertisement

Udayavani is now on Telegram. Click here to join our channel and stay updated with the latest news.

Next