ರಕ್ಷಿತ್ ತೀರ್ಥಹಳ್ಳಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ತಿಮ್ಮನ ಮೊಟ್ಟೆಗಳು’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.ಶಿವಮೊಗ್ಗ ಮೂಲದ ಅಮೆರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಹೊಂಬಣ್ಣ ಎಂಬ ಚಿತ್ರ ನಿರ್ದೇಶಿಸಿದ್ದ ರಕ್ಷಿತ್ ತೀರ್ಥಹಳ್ಳಿ “ಎಂಥಾ ಕಥೆ ಮಾರಾಯ’ ಎಂಬ ತಮ್ಮ ಎರಡನೆ ಚಿತ್ರದ ಬಿಡುಗಡೆಯ ಸನಿಹದಲ್ಲಿದ್ದಾರೆ. ಇದೀಗ ಕಾಡಿನ ನೆಂಟರು ಎಂಬ ತಮ್ಮ ಸ್ವರಚಿತ ಕಥಾ ಸಂಕಲನದಿಂದ ಒಂದು ಕಥೆಯನ್ನು ಆಯ್ದುಕೊಂಡು ಮೂರನೇ ಚಿತ್ರವಾಗಿ “ತಿಮ್ಮನ ಮೊಟ್ಟೆಗಳು’ ಚಿತ್ರೀಕರಣ ಮುಗಿಸಿ ಪೋಸ್ಟ್ ಪೊ›ಡಕ್ಷನ್ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಗೌಸ್ ಪೀರ್ ನಿರ್ದೇಶನದ ಚಿತ್ರದಲ್ಲಿ ನವ ನಟಿ ಇಶಾನ
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸುತ್ತಮುತ್ತಲೂ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿದ್ದು ಮಲೆನಾಡಿನ ಜೀವನ ಶೈಲಿ, ಪ್ರಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಈ ಚಿತ್ರ ಒಳಗೊಂಡಿದೆ.