Advertisement

ಬಾಕ್ಸ್‌ ಆಫೀಸ್‌ ನಲ್ಲಿ ʼ777 ಚಾರ್ಲಿʼ ಕಮಾಲ್‌: ಮೂರು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

07:54 PM Jun 13, 2022 | Team Udayavani |

ಬೆಂಗಳೂರು : ʼಕೆಜಿಎಫ್‌ -2ʼ  ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿದ ಬಳಿಕ, ಕನ್ನಡದ ಇನ್ನೊಂದು ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.

Advertisement

ಈ ವಾರ ಬಿಡುಗಡೆಯಾದ ಸಿಂಪಲ್‌ ಸ್ಟಾರ್ ರಕ್ಷಿತ್‌ ಶೆಟ್ಟಿ ಅಭಿನಯ‌ದ ʼ777 ಚಾರ್ಲಿʼ ಸದ್ಯ ಚಂದವನದಲ್ಲಿ ಮಾತ್ರವಲ್ಲ, ಪ್ಯಾನ್‌ ಇಂಡಿಯಾ ಸಿನಿರಂಗದಲ್ಲೂ ಭರ್ಜರಿ ಸದ್ದು ಮಾಡುತ್ತಿದೆ.

ʼಚಾರ್ಲಿʼ ಎನ್ನುವ ಶ್ವಾನ ನಾಯಕ ರಕ್ಷಿತ್‌ ಶೆಟ್ಟಿ ʼಕರ್ಣʼ ನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಎಲ್ಲೆಡೆ ಪಾಸಿಟಿವ್‌ ರೆಸ್ಪಾನ್ಸ್‌ ಕೇಳಿ ಬರುತ್ತಿದೆ. ಫನ್ನಿ ಹಾಗೂ ಇಮೋಷನಲ್‌ ಆಗಿ ಚಿತ್ರವನ್ನು ನಿರ್ದೇಶಕ ಕಿರಣ್‌ ರಾಜ್‌ ಹೇಳಿದ್ದು, ಹೊಸ ರೀತಿಯ ಪ್ರಯೋಗ ಸ್ಯಾಂಡಲ್‌ ವುಡ್‌ ಮತ್ತೆ ಗೆದ್ದಿದೆ.

ರಿಲೀಸ್‌ ಗೂ ಮುನ್ನ 777 ಚಾರ್ಲಿ 100 ಕಡೆ ಪ್ರಿಮಿಯರ್‌ ಶೋ ಆಯೋಜಿಸಿ, ಚಿತ್ರ ನೋಡುಗರಿಂದ ಉತ್ತಮ ಅಭಿಪ್ರಾಯವನ್ನು ಪಡೆದುಕೊಂಡಿತ್ತು. ಇದೀಗ ರಿಲೀಸ್‌ ಆದ ಬಳಿಕವೂ ಅದೇ ರೀತಿಯ ರೆಸ್ಪಾನ್ಸ್‌ ಕೇಳಿ ಬರುತ್ತಿದೆ.

ಚಿತ್ರ ನೋಡಲು ಥಿಯೇಟರ್‌ ನತ್ತ ಪ್ರೇಕ್ಷಕರು ಹರಿದು ಬರುತ್ತಿದ್ದು, ಬಹುತೇಕ ಕಡೆ ಹೌಸ್‌ ಫುಲ್‌ ಆಗಿದೆ. ಇಷ್ಟೆಲ್ಲಾ ರೆಸ್ಪಾನ್ಸ್‌ ಬಂದ ಬಳಿಕ ಚಿತ್ರದ ಕಲೆಕ್ಷನ್‌ ಬಗ್ಗೆ ಕುತೂಹಲ ಹುಟ್ಟುವುದು ಸಹಜ.

Advertisement

ʼ777 ಚಾರ್ಲಿʼ ಚಿತ್ರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ನಲ್ಲೂ ಹಿಂದೆ ಬಿದ್ದಿಲ್ಲ. ಮೊದಲ ದಿನ ಚಿತ್ರ ಗಳಿಸಿದ್ದು 6.2 ಕೋಟಿ ರೂ., ಎರಡನೇ ದಿನವೂ ಕಲೆಕ್ಷನ್‌ ನಲ್ಲಿ ಹಿಂದೆ ಬೀಳದೆ 7.8 ಕೋಟಿ ರೂ. ಗಳಿಸಿದ್ದು, ಮೂರನೇ ದಿನ ಅಂದರೆ ಭಾನುವಾರ 9.50 ಕೋಟಿ ರೂ.ಗಳಿಸಿ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿದೆ. ಒಟ್ಟು ಮೂರೇ ದಿನದಲ್ಲಿ 777 ಚಾರ್ಲಿ 23.50 ಕೊಟಿ ರೂಪಾಯಿಯನ್ನು ಗಳಿಸಿದೆ. ಇದರಲ್ಲಿ ಹಿಂದಿಯ ಲೆಕ್ಕಚಾರ ಇನ್ನು ಕೂಡ ಹೊರ ಬಂದಿಲ್ಲ ಎನ್ನಲಾಗಿದೆ.

ಕೆಜಿಎಫ್‌ -2 ಬಳಿಕ ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್‌ ಇಂಡಿಯಾದಲ್ಲಿ ಸದ್ದು ಮಾಡುತ್ತಿರುವುದು ಸ್ಯಾಂಡಲ್‌ ವುಡ್‌ ಗೆ ಸಂತಸದ ವಿಷಯ.

Advertisement

Udayavani is now on Telegram. Click here to join our channel and stay updated with the latest news.

Next