ಅಣ್ಣ ನೀ ನನ್ನ ಸ್ನೇಹಿತ, ಸದಾ ನನ್ನ ಶ್ರೇಯಸ್ಸನ್ನು ಬಯಸುವ ವ್ಯಕ್ತಿ. ಇಷ್ಟೆಲ್ಲಾ ಪ್ರೀತಿ ಇದ್ದರೂ ನಾವಿಬ್ಬರು ಪ್ರತಿದಿನ ಜಗಳವಾಡುತ್ತಾ, ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಇರುತ್ತೇವೆ. ಅದೆಷ್ಟೋ ಬಾರಿ ನನ್ನನು ಕೋಪಗೊಳಿಸಿರುವೆ, ಆ ಕೋಪದಲ್ಲಿ ನಾನು ಅತ್ತಾಗ ನೀ ನನಗೆ ಸಮಾಧಾನವನ್ನು ಮಾಡಿರುವೆ. ಪ್ರತಿ ಬಾರಿ ನಮ್ಮಿಬ್ಬರ ಮಧ್ಯೆ ಜಗಳವಾದಗಾ ಮೊದಲು ನೀನೇ ಬಂದು ನನ್ನ ಬಳಿ ಮಾತಾಡುವೆ. ನಾನು ಏನೇ ಕೇಳಿದರು ಅದನ್ನು ನೀನು ತಂದು ಕೊಟ್ಟಿರುವೆ. ಆದರೂ ಕೆಲವೊಂದು ಬಾರೀ ನನ್ನನ್ನು ಸತಾಯಿಸಿರುವೆ. ಎಷ್ಟೇ ಕಿತ್ತಾಡಿದರು, ಜಗಳವಾಡಿದರು ನಮ್ಮಿಬ್ಬರ ಪ್ರೀತಿ ವಾಸ್ತಲ್ಯಾ ಎಂದೂ ಕಡಿಮೆಯಾಗಿಲ್ಲ.
ಈ ನಿನ್ನ ಅಕ್ಕರೆ, ಪ್ರೀತಿ ಯಾವಾಗಲೂ ಹೀಗೆಯೇ ಇರಲಿ. ನನಗೆ ದೇವರು ಕೊಟ್ಟಿರುವ ಒಂದು ಅಮೂಲ್ಯ ಉಡುಗೊರೆ ಎಂದರೆ ಅದು ನೀನೇ ಅಣ್ಣ.
ಮಾಲಾಶ್ರೀ
ಪ್ರಥಮ ಎಂ. ಸಿ. ಜೆ, ವಿವೇಕಾನಂದ ಕಾಲೇಜು ಪುತ್ತೂರು.