Advertisement

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

03:57 PM Aug 11, 2022 | Team Udayavani |

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ʼಕೆಜಿಎಫ್‌ -2ʼ  ಬಳಿಕ ತಮ್ಮ ಕುಟುಂಬದೊಂದಿಗೆ ಆತ್ಮೀಯವಾದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ರಕ್ಷಾ ಬಂಧನದಂದು ಅವರು ವಿಶೇಷವಾದ ಫೋಟೋ ಹಂಚಿಕೊಂಡು ಶುಭಾಶಯವನ್ನು ತಿಳಿಸಿದ್ದಾರೆ.

Advertisement

ಇತ್ತೀಚಿಗೆ ರಾಕಿಂಗ್‌ ಸ್ಟಾರ್‌ ದಂಪತಿ ವಿದೇಶ ಪಯಣ ಮಾಡಿ ಬಂದಿದ್ದಾರೆ. ಪ್ರವಾಸದಲ್ಲಿನ ಸುಂದರ ಕ್ಷಣಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಟಲಿಯಲ್ಲಿ ಪ್ಯಾನ್‌ ಇಂಡಿಯಾ ಸ್ಟಾರ್‌ ತಮ್ಮ ಅಭಿಮಾನಿಗಳು ಭೇಟಿಯಾದ ಫೋಟೋವೊಂದನ್ನು ಶೇರ್‌ ಮಾಡಿಕೊಂಡು ಇದು ಬಹಳ ವಿಶೇಷವಾದದ್ದು ಎಂದು ಹೇಳಿಕೊಂಡಿದ್ದರು.

ಬಣ್ಣದ ಲೋಕದಿಂದ ಕೊಂಚ ಬ್ರೇಕ್‌ ಪಡೆದು ಫ್ಯಾಮಿಲಿಯೊಂದಿಗೆ ಕಾಲ ಕಳೆದ ಯಶ್‌ ಮತ್ತೆ ಊರಿಗೆ ವಾಪಾಸ್‌ ಆಗಿದ್ದಾರೆ. ಮನೆಮಂದಿಯ ಜೊತೆ ರಕ್ಷಾ ಬಂಧನವನ್ನು ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!

ಯಶ್‌ ಪ್ರತಿವರ್ಷ ತನ್ನ ತಂಗಿ ಕೈಯಿಂದ ರಾಖಿಯನ್ನು ಕಟ್ಟಿಸಿಕೊಂಡು, ಹಬ್ಬದ ಶುಭಾಶಯವನ್ನು ಕೋರುತ್ತಾರೆ. ಈ ಬಾರಿಯೂ ಯಶ್‌ ತನ್ನ ತಂಗಿ ನಂದಿನಿ ಅವರಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ಅಣ್ಣ – ತಂಗಿಯ ಪ್ರೀತಿಯ ಹಬ್ಬ ರಕ್ಷಾ ಬಂಧನವನ್ನು ಆಚರಿಸಿಕೊಂಡ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.

Advertisement

ಒಡಹುಟ್ಟಿದವರು, ಜೀವಮಾನದಾದ್ಯಂತ ಪ್ರೀತಿ ಮತ್ತು ಬೆಂಬಲದಿಂದ ಜೊತೆಗಿದ್ದೇವೆ. ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.” ಎಂದು ಯಶ್ ಬರೆದುಕೊಂಡಿದ್ದಾರೆ.

ಸದ್ಯ ಯಶ್‌ ಅವರ ಮುಂದಿನ ಚಿತ್ರ ಯಾವುದೆನ್ನುವ ಕುತೂಹಲ ಹಾಗೆಯೇ ಉಳಿದಿದೆ. ಯಾವಾಗ ಮತ್ತು ಯಾರೊಂದಿಗೆ ರಾಕಿಂಗ್‌ ಸ್ಟಾರ್‌ ಮುಂದಿನ ಚಿತ್ರ ಮಾಡುತ್ತಾರೆ ಎನ್ನುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next