ಮುಂಬಯಿ: ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಈಗ ಮತ್ತೆ ಸುದ್ದಿಯಲ್ಲಿದ್ದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ಕೆಳೆದ ಕೆಲ ದಿನಗಳ ಹಿಂದೆ ನಟಿ ರಾಖಿ ಸಾವಂತ್ ಅವರು ನಟಿ ಶೆರ್ಲಿನ್ ಚೋಪ್ರಾ ಅವರ ಆಕ್ಷೇಪಾರ್ಹ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಇದರ ಕುರಿತು ಶೆರ್ಲಿನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು, ಇದೀಗ ಮುಂಬೈ ಪೊಲೀಸರು ನಟಿ ರಾಖಿ ಸಾವಂತ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನಟಿ ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿದ್ದಾರೆ, ಅಲ್ಲದೆ ಅವರ ಜಾಮೀನು ಅರ್ಜಿ ಕೂಡಾ ತಿರಸ್ಕೃತವಾಗಿದೆ ಎಂದು ಬರೆದುಕೊಂಡಿದ್ದಾರೆ.
ನಟಿ ರಾಖಿ ಸಾವಂತ್ ಅವರು ಪ್ರಿಯಕರ ಆದಿಲ್ ಖಾನ್ ಜೊತೆ ಮದುವೆ ಆಗಿರುವ ವಿಚಾರ ಇತ್ತೀಚೆಗೆ ಬಹಿರಂಗ ಆಯಿತು.
ಇದನ್ನೂ ಓದಿ: ಕಾಂಗ್ರೆಸ್ ಮಹಾ ಅಲೆ ಪ್ರಾರಂಭವಾಗಿದೆ: ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್
Related Articles