Advertisement

ರಾಜ್ಯೋತ್ಸವಕ್ಕೆ ಕನ್ನಡ ದೇಶದೊಳ್‌

11:20 AM Oct 31, 2018 | Team Udayavani |

“ಕನ್ನಡ ದೇಶದೊಳ್‌’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ತಿಳಿದಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ನವೆಂಬರ್‌ 1 ರಂದು ಬಿಡುಗಡೆಯಾಗುತ್ತಿದೆ. ರಾಜ್ಯೋತ್ಸವದಂದೇ ಚಿತ್ರ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಕನಸು ಕಂಡಿತ್ತು. ಅದೀಗ ಈಡೇರಿದೆ. ಈ ಚಿತ್ರವನ್ನು ಅಭಿರಾಮ್‌ ಕಂಠೀರವ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡದ ಕಂಪನ್ನು ಸೂಸಲಿದ್ದಾರಂತೆ.

Advertisement

“ಈ ಟೈಟಲ್‌ನಡಿ ಸಿನಿಮಾ ಮಾಡಿದ್ದರಿಂದ ನನ್ನ ಜವಾಬ್ದಾರಿ ಹೆಚ್ಚಿತ್ತು. ಈ ಚಿತ್ರದ ಮೂಲಕ ಕನ್ನಡ ಶಕ್ತಿಯನ್ನು ತೋರಿಸಲಿದ್ದೇನೆ. ಈ ಮೂಲಕ ಕನ್ನಡ ಮಾತನಾಡದವರು ಕೂಡಾ ನಮ್ಮ ಕನ್ನಡದ ಬಗ್ಗೆ ಹೆಮ್ಮೆ ಪಡುವಂತಾಗಬೇಕು’ ಎನ್ನುವುದು ನಿರ್ದೇಶಕ ಕಂಠೀರವ ಅವರ ಮಾತು. ಈ ಚಿತ್ರವನ್ನು 30 ಜಿಲ್ಲೆಗಳಲ್ಲಿ ಚಿತ್ರೀಕರಿಸಿದ್ದು, ಈ ಸಮಯದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾಗಿ ಹೇಳಿಕೊಂಡರು. ಚಿತ್ರಕ್ಕೆ ಸೊಲೋಮನ್‌ ಸಂಗೀತ ನೀಡಿದ್ದಾರೆ.

ಚಿತ್ತೂರು ಮೂಲದ ಸೋಲೋಮನ್‌, ಕೇರಳದಲ್ಲಿ ಸಂಗೀತ ಕಲಿತು, ತಮಿಳುನಾಡಿನಲ್ಲಿ ಕೆಲಸ ಆರಂಭಿಸಿ, ಈಗ ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರವನ್ನು ಪ್ರಕಾಶ್‌, ವಿನೋದ್‌, ವೆಂಕಟೇಶ್‌, ಯೋಗಾನಂದ್‌ ಹಾಗೂ ವಿಶ್ವನಾಥ್‌ ಸೇರಿ ನಿರ್ಮಿಸಿದ್ದಾರೆ.  ಈ ಚಿತ್ರದ ತಾರಾಬಳಗದಲ್ಲಿ ಸುಚೇಂದ್ರ ಪ್ರಸಾದ್‌, ಟೆನ್ನಿಸ್‌ ಕೃಷ್ಣ, ರಾಕ್‌ಲೈನ್‌ ಸುಧಾಕರ್‌, ರೇಖಾದಾಸ್‌, ಬಿರಾದಾರ್‌, ತಾರಕ್‌ ಪೊನ್ನಪ್ಪ ಮುಂತಾದವರಿದ್ದಾರೆ. ಜೇನ್‌ ಮತ್ತು ಬ್ರಾಡ್‌ ಎಂಬ ವಿದೇಶಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next