Advertisement
ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್ ಗೇಟ್ ಮುರಿದಾಗ ನೀರು ಉಳಿಸಿ ಕೊಟ್ಟು ಸಾವಿರಾರು ರೈತರ ಆತಂಕ ದೂರ ಮಾಡಿದ ನೀರಾವರಿ ತಜ್ಞ ಕನ್ನಯ್ಯ ನಾಯ್ಡು, ಅಯೋಧ್ಯೆ ಬಾಲಕರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್, ಪ್ರತಿಫಲಾ ಪೇಕ್ಷೆ ಇಲ್ಲದೆ ಸಾವಿರಾರು ಹೆರಿಗೆ ಮಾಡಿದ ರಾಯಚೂರಿನ ಮಲ್ಲಮ್ಮ ಸೂಲಗಿತ್ತಿ, ಐಐಎಸ್ಸಿ ವಿಜ್ಞಾನಿ ಪ್ರೊ| ಟಿ.ವಿ. ರಾಮಚಂದ್ರ, ಕಾಂಗ್ರೆಸ್ ಮುಖಂಡ, ಸಾಹಿತಿ ಡಾ| ಎಂ. ವೀರಪ್ಪ ಮೊಲಿ, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 69 ಮಂದಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದರ ಜೊತೆ ಈ ಬಾರಿ ಸುವರ್ಣ ಕರ್ನಾಟಕ (50 ವರ್ಷ) ವರ್ಷವಾದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಪುರುಷರು ಹಾಗೂ 5೦ ಮಂದಿ ಮಹಿಳಾ ಸಾಧಕರಿಗೆ ವಿಶೇಷ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದರು. ನ. 1ರ ಕರ್ನಾಟಕ ರಾಜ್ಯೋತ್ಸವದಂದು ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. ಪ್ರಶಸ್ತಿಯು 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಪದಕ ಒಳಗೊಂಡಿರಲಿದ್ದು, ಸಾಧಕರೊಂದಿಗೆ ಮುಖ್ಯಮಂತ್ರಿಗಳ ಚಹಾ ಕೂಟ ನಡೆಯಲಿದೆ. ಪೊಲೀಸ್ ಬ್ಯಾಂಡ್ನ ಗೌರವಾದರಗಳೊಂದಿಗೆ ಸಾಧಕರನ್ನು ವೇದಿಕೆಗೆ ಕರೆತಂದು ಸಮ್ಮಾನಿಸಲಾಗುತ್ತದೆ ಎಂದು ವಿವರಿಸಿದರು. 1,575 ಅರ್ಜಿ, 7,438 ನಾಮನಿರ್ದೇಶನ
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1,575 ಅರ್ಜಿಗಳು ಭೌತಿಕವಾಗಿ ಬಂದಿದ್ದರೆ, ಸೇವಾ ಸಿಂಧು ಮೂಲಕ 1,309 ಸಾಧಕರ ಹೆಸರಿನಲ್ಲಿ 7,438 ನಾಮನಿರ್ದೇಶನಗಳು ಬಂದಿದ್ದವು. ಅವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ, 69 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಪ್ರತೀ ಜಿಲ್ಲೆಗೂ ಪ್ರಾತಿನಿಧ್ಯ ನೀಡಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
Related Articles
ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಹೊರತು ಪಡಿಸಿ ಎಲ್ಲರೂ 60 ವರ್ಷ ಮೇಲ್ಪಟ್ಟವರೇ ಆಗಿದ್ದು, ಯೋಗಿರಾಜ್ ಅವರನ್ನು ವಿಶೇಷ ಪ್ರಕರಣವೆಂದು ಭಾವಿಸಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.
Advertisement
ತೆರೆಮರೆಯ ಸಾಧಕರಿಗೆ ಪ್ರಶಸ್ತಿಯ ಸಮ್ಮಾನಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ವೇಳೆ ಹಲವಾರು ತೆರೆಮರೆಯ ಸಾಧಕರನ್ನೂ ಗುರುತಿಸಲಾಗಿದೆ. ಬಯಲಾಟ ಕ್ಷೇತ್ರದಲ್ಲಿ ವಿಜಯನಗರ ಜಿಲ್ಲೆಯ 92 ವರ್ಷದ ನಾರಾಯಣಪ್ಪ ಶಿಳ್ಳೆಕ್ಯಾತ, ಜಾನಪದ ಕ್ಷೇತ್ರದಲ್ಲಿ ಬೀದರ್ ಜಿಲ್ಲೆಯ ಅಂಧ ಕಲಾವಿದ ನರಸಿಂಹಲು, ರಾಯಚೂರಿನ ಮಲ್ಲಮ್ಮ ಸೂಲಗಿತ್ತಿಯಂತಹ ಎಲೆಮರೆಯ ಕಾಯಿ ಗಳಂತೆ ಸೇವೆಗೈಯ್ಯುತ್ತಿದ್ದ ಸಾಧಕರನ್ನೂ ಸರ್ಕಾರ ಗುರುತಿಸಿದೆ. ಜತೆಗೆ ಆಯ್ಕೆ ಸಮಿತಿ ಶಿಫಾರಸನ್ನೂ ಪರಿಗಣಿಸಿದೆ. ಒಟ್ಟಾರೆ ಸಾಧಕರ ಪೈಕಿ 13 ಮಹಿಳಾ ಸಾಧಕಿಯರನ್ನೂ ಗುರುತಿಸಲಾಗಿದೆ. ಜಾನಪದ ಕ್ಷೇತ್ರ
ಇಮಾಮಸಾಬ ಎಂ. ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್.ಜಿ. ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ) ಚಲನಚಿತ್ರ-ಕಿರುತೆರೆ
ಹೇಮಾ ಚೌಧರಿ
ಎಂಎಸ್ ನರಸಿಂಹಮೂರ್ತಿ ಸಾಹಿತ್ಯ
ಬಿ.ಟಿ.ಲಲಿತಾ ನಾಯಕ್,
ಎಂ.ವೀರಪ್ಪ ಮೊಯಿಲಿ ಆಡಳಿತ
ಎಸ್.ವಿ.ರಂಗನಾಥ್ (ಐಎಎಸ್) ಶಿಲ್ಪಕಲೆ ಅರುಣ್ ಯೋಗಿರಾಜ್ ಬಸವರಾಜ್ ಬಡಿಗೇರ ಯಕ್ಷಗಾನ ಕೇಶವ ಹೆಗಡೆ ಕೊಳಗಿ ಸೀತಾರಾಮ ತೋಳ್ಪಾಡಿ