Advertisement
ಈ ಕುರಿತಂತೆ ಮೇಲ್ಮನೆಯ ಇತಿಹಾಸ ಮತ್ತು ಪ್ರಮುಖ ಘಟನೆಗಳನ್ನು ಸಾರುವ ಕೈಪಿಡಿಯನ್ನು ಉಪರಾಷ್ಟ್ರಪತಿಗಳು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಹಲವಾರು ಕುತೂಹಲಕಾರಿ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಇದುವರೆಗೆ ಮೇಲ್ಮನೆ ಅಂಗೀಕರಿಸಿದ ಮಸೂದೆಗಳು : 3,924 ತಿರಸ್ಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳು : 03
Related Articles
Advertisement
ವಾಗ್ದಂಡನೆ ಪ್ರಕ್ರಿಯೆ : 01
ಲೋಕಸಭೆಯಲ್ಲಿ ಅಂಗೀಕೃತವಾಗಿ ರಾಜ್ಯಸಭೆಯು ತಿರಸ್ಕರಿಸಿದ ಮಸೂದೆಗಳ ಒಟ್ಟು ಸಂಖ್ಯೆ: 05
ರಾಜ್ಯಸಭೆ ಮಂಡಿಸಿದ ಮಸೂದೆಗಳು ಪಾಸ್ : 120
ರಾಜ್ಯಸಭೆಯಲ್ಲಿ ನಡೆದ ಕಾರ್ಯ ಕಲಾಪಗಳು : 5466
ಮಂಡಿಸಲಾದ ಒಟ್ಟು ಮಸೂದೆಗಳು : 944
ಹಿಂದಕ್ಕೆ ಪಡೆದ ಬಿಲ್‌ಗಳು : 104
ಬಾಕಿ ಉಳಿದಿರುವ ಬಿಲ್‌ಗಳು : 38
ರಾಜ್ಯಸಭೆ ಅನುಮೋದಿಸಿದ ಬಿಲ್‌ಗಳು : 3,817
ರಾಜ್ಯಸಭೆಗೆ ಈವರೆಗೆ ಆಯ್ಕೆಗೊಂಡಿರುವ ಒಟ್ಟು ಸದಸ್ಯರು : 2,282
ರಾಜ್ಯ ಸಭೆಯಲ್ಲಿ ಕಾರ್ಯನಿರ್ವಹಿಸಿದ ಮಹಿಳೆಯರು : 208
ಮಹಿಳೆಯರ ಮೀಸಲಾತಿ
ವರ್ಷ – ಸಂಸದೆಯರು – ಶೇ.
1952 – 15 – 6.94
2014 – 31 – 12.76
2019 – 26 – 10.83
ಪ್ರಸ್ತುತ ಏಳನೇ ಅವಧಿಗೆ ಆಯ್ಕೆಗೊಂಡಿರುವ ಬಿಜೆಪಿಯ ಮಹೇಂದ್ರ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಅತಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸದಸ್ಯರಾಗಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಮಾಜೀ ಪ್ರಧಾನಿ ಮತ್ತು ಹಣಕಾಸು ತಜ್ಞ ಡಾ| ಮನಮೋಹನ್ ಸಿಂಗ್ ಅವರಿದ್ದು, ಒಟ್ಟು ಆರು ಸಲ ಇವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಣಿಪುರದ ರಾಜ್ಯಪಾಲೆಯಾಗಿರುವ ನಜ್ಮಾ ಹೆಫ್ತುಲ್ಲಾ ಅವರು ರಾಜ್ಯಸಭೆಯಲ್ಲಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಮಹಿಳೆಯಾಗಿದ್ದಾರೆ.
ಅಪರೂಪದ ದಾಖಲೆಗಳುರಾಜ್ಯಸಭೆಯು 2 ಬಾರಿ ಬೇರೆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅನುಮತಿ ನೀಡಿತ್ತು. ಸಂವಿಧಾನದ ವಿಧಿ 356(3)ರ ಅಡಿ ಲೋಕಸಭೆಯನ್ನು ವಿರ್ಜಿಸಿದ್ದ ಸಂದರ್ಭದಲ್ಲಿ ರಾಜ್ಯಸಭೆಯು ಈ ಕೆಲಸ ಮಾಡಿತ್ತು.
- 1977ರಲ್ಲಿ ಮೊದಲಬಾರಿಗೆ ತಮಿಳುನಾಡು ಮತ್ತು ನಾಗಾಲ್ಯಾಂಡ್.
- 1991ರಲ್ಲಿ ಹರಿಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
ಸುಬ್ರಮಣಿಯನ್ ಸ್ವಾಮಿ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರ ನಡವಳಿಕೆಗಳು ಸದನಕ್ಕೆ ಅಗೌರವ ತರುವಂತಿತ್ತು ಎಂಬ ಕಾರಣಕ್ಕೆ ನ.15, 1976ರಂದು ಉಚ್ಚಾಟನೆಗೊಂಡಿದ್ದರು. ಛತ್ರಪಾಲ್ ಸಿಂಗ್ ಲೋಧ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಕೊಡುವಂತೆ ಬೇಡಿಕೆ ಮಂಡಿಸಿದ ಕಾರಣ 2005ರಲ್ಲಿ ಉಚ್ಚಾಟನೆಗೊಂಡಿದ್ದರು. ಸಂಸದರ ಕ್ಷೇತ್ರಾಭಿವೃದ್ಧಿಗಾಗಿ ಸರಕಾರ ಕೊಡುವ ನಿಧಿ ದುರ್ಬಳಕೆ ಆರೋಪದಲ್ಲಿ ಸಾಕ್ಷಿ ಮಹರಾಜ್ ಅವರನ್ನು 2006ರಲ್ಲಿ ಉಚ್ಚಾಟಿಸಲಾಗಿತ್ತು. 120 ತಿದ್ದುಪಡಿ
– ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗಳು ಸೇರಿದಂತೆ ಲೋಕಸಭೆಯು ಅಂಗೀಕರಿಸಿದ್ದ ಒಟ್ಟು 120 ಮಸೂದೆಗಳಿಗೆ ರಾಜ್ಯಸಭೆ ಅನುಮೋದನೆ ನೀಡಿದೆ. ಸುದೀರ್ಘ ಚರ್ಚೆಗಳು
12.04 ಗಂಟೆ: 1991ರ ಜೂನ್ 4ರಂದು ರಾಜೀವ್ ಗಾಂಧಿ ಅವರಿಗೆ ಭದ್ರತೆ ಒದಗಿಸುವಲ್ಲಿ ಆಗಿರುವ ವೈಫಲ್ಯದ ಬಗ್ಗೆ ನಡೆದ ಚರ್ಚೆಯ ಅವಧಿ. 11.37 ಗಂಟೆ: 1992ರ ಡಿ. 18 ಮತ್ತು 21ರಲ್ಲಿ ಬಾಬರಿ ಮಸೀದಿ ಕೆಡವಿದ ವಿಚಾರವಾಗಿ ನಡೆದ ಚರ್ಚೆಯ ಅವಧಿ. 10.06 ಗಂಟೆ: 2007ರ ಡಿ. 4 ಮತ್ತು 12ರಂದು ಭಾರತ- ಅಮೆರಿಕ ಅಣು ಒಪ್ಪಂದ ಕುರಿತ ಚರ್ಚೆಯ ಅವಧಿ.