Advertisement

Rajya Sabha polls: ಎಸ್‌ಟಿಎಸ್‌, ಹೆಬ್ಬಾರ್‌ ವಿರುದ್ಧ ಶಿಸ್ತುಕ್ರಮ?

01:15 AM Feb 28, 2024 | Team Udayavani |

ಬೆಂಗಳೂರು: ಪಕ್ಷದ ವಿಪ್‌ ಉಲ್ಲಂಘಿಸಿದ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಹಾಗೂ ಶಿವರಾಮ ಹೆಬ್ಬಾರ್‌ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೆಜ್ಜೆ ಇರಿಸಿದೆ.

Advertisement

ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ಹಾಗೂ ಹಿರಿಯ ನಾಯಕರು ಸಭೆ ನಡೆಸಿದ್ದು, ಇಬ್ಬರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ವಿಪ್‌ ಉಲ್ಲಂ ಸಿರುವ ಬಗ್ಗೆ ಸ್ಪೀಕರ್‌ಗೆ ದೂರು ನೀಡಿ ಅನರ್ಹತೆಗೆ ಮನವಿ ಮಾಡಲು ನಿರ್ಧರಿಸಲಾಗಿದ್ದು, ವರಿಷ್ಠರ ನಿರ್ದೇಶನದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಪಕ್ಷದ ರಾಜ್ಯ ನಾಯಕರು ವರಿಷ್ಠರಿಗೆ ದೂರು ನೀಡಿದ್ದು, ಇಬ್ಬರನ್ನು ಅಮಾನತುಗೊಳಿಸಬೇಕೇ, ಪಕ್ಷದಿಂದ ಉಚ್ಚಾಟಿಸಬೇಕೇ ಎಂಬ ಬಗ್ಗೆ ಚರ್ಚಿಸಿ ನಿರ್ಧರಿ ಸಲು ಮುಂದಾಗಿದ್ದಾರೆ.

ಒಂದು ವಾರದ ಮೊದಲೇ ಸೋಮಶೇಖರ್‌ ಸುಳಿವು
“ಅವಮಾನ ಆದ ಮೇಲೆ ಬಿಜೆಪಿಯಲ್ಲಿ ಇದ್ದು ಏನು ಮಾಡಲಿ’ ಎಂದು ಶಾಸಕ ಸೋಮಶೇಖರ್‌ ಅವರು ಫೆ. 21ರಂದು ಉದಯವಾಣಿಯ “ನೇರಾನೇರ’ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಲ್ಲದೆ, ಜೆಡಿಎಸ್‌ ಜತೆಗಿನ ಮೈತ್ರಿಯನ್ನು ಒಪ್ಪುವುದಿಲ್ಲ ಎಂದಿದ್ದರು.

ಕಾಂಗ್ರೆಸ್‌ ಜತೆಗೆ ಬಹಿರಂಗವಾಗಿಯೇ ಸೋಮಶೇಖರ್‌ ಗುರುತಿಸಿಕೊಳ್ಳುತ್ತಿದ್ದರು. ಬಿಜೆಪಿಯ ಮೊದಲ ಅಭ್ಯರ್ಥಿಗೆ ಮತ ಹಾಕಬೇಕೆಂದು ಸೂಚಿಸಲಾಗಿತ್ತು. ಅಡ್ಡ ಮತದಾನ ಮಾಡಿರುವ ಅವರ ವಿರುದ್ಧ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಇದು ಆತ್ಮಸಾಕ್ಷಿಯಲ್ಲ, ರಾಜಕೀಯ ಆತ್ಮಹತ್ಯೆ.
-ಆರ್‌. ಅಶೋಕ್‌,
ವಿಧಾನಸಭೆ ವಿಪಕ್ಷ ನಾಯಕ

Advertisement

 

Advertisement

Udayavani is now on Telegram. Click here to join our channel and stay updated with the latest news.

Next