Advertisement

ರಾಜ್ಯಸಭೆ ಚುನಾವಣೆ ಮತಹಂಚಿಕೆ ಹೇಗೆ?

11:53 PM Jun 09, 2022 | Team Udayavani |

ಬಹುನಿರೀಕ್ಷೆಯ ರಾಜ್ಯಸಭೆ ಚುನಾವಣೆ ಶುಕ್ರವಾರ ನಡೆಯಲಿದೆ. ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿ ಇದ್ದಾರೆ. ಹೀಗಾಗಿ ಮತ ಲೆಕ್ಕಾಚಾರ ಕುತೂಹಲ ಕೆರಳಿಸಿದೆ. ಹೀಗಾಗಿ ನಮ್ಮ ರಾಜ್ಯದ ಮತ ಲೆಕ್ಕಾಚಾರದ ವಿವರ ಇಲ್ಲಿದೆ.

Advertisement

ಮೂವರಿಗೆ ಗೆಲುವು ಸುಲಭ :

ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ಗಳಿಗೆ ಈಗಿರುವ ಸಂಖ್ಯಾಬಲ ಹಾಗೂ ಅಭ್ಯರ್ಥಿಗಳಿಗೆ ಮಾಡಲಾಗುವ ಮತ ಹಂಚಿಕೆ ಆಧಾರದಲ್ಲಿ  ಬಿಜೆಪಿಯ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಹಾಗೂ ಕಾಂಗ್ರೆಸ್‌ನ ಜೈರಾಂ ರಮೇಶ್‌ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಮೊದಲ ಸುತ್ತಿನಲ್ಲೇ ಅನಾಯಾಸವಾಗಿ ಗೆಲುವು ಸಾಧಿಸುತ್ತಾರೆ.

ಒಂದು ಸ್ಥಾನ; ಅಭ್ಯರ್ಥಿಗಳು ಮೂವರು :

ಉಳಿದಿರುವ ಒಂದು ಸ್ಥಾನಕ್ಕೆ ಮೂರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಇದರಲ್ಲಿ  ಜೆಡಿಎಸ್‌ ಬಳಿ ಅತೀ ಹೆಚ್ಚು ಅಂದರೆ 32 ಮೊದಲ ಪ್ರಾಶಸ್ತ್ಯದ ಮತಗಳು ಉಳಿಯುತ್ತವೆ. ಉಳಿದಂತೆ ಬಿಜೆಪಿ ಬಳಿ 32 ಹೆಚ್ಚುವರಿ ಮತಗಳು, 90 ಎರಡನೇ ಪ್ರಾಶಸ್ತ್ಯದ ಮತಗಳು ಇರುತ್ತವೆ. ಕಾಂಗ್ರೆಸ್‌ ಬಳಿ 25 ಹೆಚ್ಚುವರಿ ಮತಗಳು, 45 ಎರಡನೇ ಪ್ರಾಶಸ್ತ್ಯದ ಮತಗಳು ಉಳಿಯುತ್ತವೆ. ಜೆಡಿಎಸ್‌ ಬಳಿ ಎರಡನೇ ಪ್ರಾಶಸ್ತ್ಯದ ಮತಗಳಿಗೆ ಅವಕಾಶವಿಲ್ಲ.

Advertisement

ಪಕ್ಷಗಳ ಸಂಖ್ಯಾಬಲ :

ಬಿಜೆಪಿ-122

(ಸ್ಪೀಕರ್‌-ಇಬ್ಬರು ಪಕ್ಷೇತರರು ಸೇರಿ)

ಕಾಂಗ್ರೆಸ್‌-70

(ಒಬ್ಬರು ಪಕ್ಷೇತರ)

ಜೆಡಿಎಸ್‌-32

ನಾಮನಿರ್ದೇಶಿತ ಸದಸ್ಯರು ಒಬ್ಬರು (ಮತದಾನದ ಹಕ್ಕು ಇಲ್ಲ)

2ನೇ ಹಂತಕ್ಕಿಲ್ಲ ಅವಕಾಶ :

ಮೊದಲ ಸುತ್ತಿನಲ್ಲಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಚುನಾಯಿತ ಎಂದು ಘೋಷಿಸಿದ ಬಳಿಕ ಮತ್ತು ಮೊದಲ ಸುತ್ತಿನಲ್ಲಿ ಅತೀ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಕಣದಿಂದ ಕೈಬಿಡುವ ಪ್ರಕ್ರಿಯೆ ಅನಂತರ 2ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಕಣದಿಂದ ಕೈಬಿಡಲಾದ ಅಭ್ಯರ್ಥಿಗಳಿಗೆ ಬಿದ್ದಿರುವ ಮತಗಳು ಆತನಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದ ಅಭ್ಯರ್ಥಿಗೆ ವರ್ಗಾಯಿಸಲಾಗುತ್ತದೆ. ಈ ರೀತಿ ಎರಡನೇ ಪ್ರಾಶಸ್ತ್ಯದ ಮತಗಳ ಪ್ರಕ್ರಿಯೆ ನಡೆದು ನಾಲ್ಕನೇ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ. ಅಡ್ಡ ಮತದಾನ ನಡೆದರೆ ಶಾಸಕರು ಮತದಾನಕ್ಕೆ ಗೈರು ಹಾಜರಾದರೆ ಮತಗಳು ಕುಲಗೆಟ್ಟರೆ ಲೆಕ್ಕಾಚಾರದಲ್ಲಿ ಏರುಪೇರು ಆಗುವ ಸಾಧ್ಯತೆಗಳಿರುತ್ತವೆ.

ಮತ ನಿಗದಿಗೆ ಅನುಸರಿಸುವ ಸೂತ್ರ :

ಒಟ್ಟು ಅರ್ಹ ಮತಗಳು ಗಿ 100 (ಒಂದು ಮತದ ಮೌಲ್ಯ) + 1

ಸ್ಥಾನಗಳ ಸಂಖ್ಯೆ +1

224ಗಿ 100 +1

4+ 1

22,401= 4,481 ಅಥವಾ 44.81 ಇದಕ್ಕೆ 5 ಎಂದು ಅಂತಿಮಗೊಳಿಸಲಾಗುತ್ತದೆ. ಒಟ್ಟಾರೆ 45 ಮತಗಳನ್ನು ನಿಗದಿಪಡಿಸಲಾಗುತ್ತದೆ. ಅಂದರೆ 4,500 ಒಂದು ಮತದ ಮೌಲ್ಯ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next