Advertisement
“ಕಾರ್ಗಿಲ್ ವಿಜಯ್ ದಿವಸ್’ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಆಯೋಜಿಸಲಾಗಿದ್ದ ಭಾರತೀಯ ಪಡೆಗಳ ಹುತಾತ್ಮ ಯೋಧರ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಮೂರು ಪಡೆಗಳ ಜಂಟಿ ಕಾರ್ಯಾಚರಣೆಯಡಿ ಈ ಹಿಂದೆ ಆಪರೇಷನ್ ವಿಜಯ್ (ಕಾರ್ಗಿಲ್ ಯುದ್ಧ) ಸೇರಿದಂತೆ ಅನೇಕ ಯುದ್ಧಗಳನ್ನು ನಡೆಸಲಾಗಿತ್ತು. ಅಂಥ ಸಂದರ್ಭಗಳು ಮುಂದೆಯೂ ಬಂದಾಗ ಮೂರು ಪಡೆಗಳಾದ ನೌಕಾಪಡೆ, ಭೂಸೇನೆ ಹಾಗೂ ವಾಯುಪಡೆಗಳ ನಡುವೆ ಉತ್ತಮ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಜಾಯಿಂಟ್ ಥಿಯೇಟರ್ ಕಮಾಂಡ್ ರಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
“ಭಾರತವು ಶಕ್ತಿಶಾಲಿ ರಾಷ್ಟ್ರವಾಗಿದೆ. ಯಾವುದೇ ವಿದೇಶಿ ಶಕ್ತಿ ಭಾರತದ ಮೇಲೆ ಕೆಟ್ಟ ಕಣ್ಣು ಬಿಟ್ಟರೆ, ನಾವು ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಹೊಂದಿದ್ದೇನೆ. ಹಾಗೊಂದು ವೇಳೆ ಯುದ್ಧ ಸಂಭವಿಸಿದರೆ, ನಾವು ಗೆಲ್ಲುವುದು ಶತಸಿದ್ಧ” ಎಂದು ಅವರು ವಿವರಿಸಿದರು.
ನೆಹರೂ ವಿರುದ್ಧ ವಾಗ್ಧಾಳಿ:
ಚೀನಾ ಸೇನೆಯು 1962ರಲ್ಲಿ ಲಡಾಖ್ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ, ಪಂಡಿತ್ ನೆಹರೂ ಅವರು ನಮ್ಮ ದೇಶದ ಪ್ರಧಾನಿಯಾಗಿದ್ದರು. ಆಗ ಚೀನಾ ಮಾಡಿದ ಅತಿಕ್ರಮಣವನ್ನು ತಡೆಯಲು ಸಾಧ್ಯವಾಗಲಿಲ್ಲ. ಭಾರತ ಇಂದು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.
ಹುತಾತ್ಮರ ಸ್ಮರಣೆ :
ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬದವರನ್ನು ರಾಜನಾಥ್ ಸಿಂಗ್ ವೈಯಕ್ತಿಕವಾಗಿ ಮಾತನಾಡಿಸಿದರು. ನಮ್ಮ ಯೋಧರು ಭಾರತಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟು ಹೋರಾಡಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುತ್ತಾ ನಾನು ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ರಾಜನಾಥ್‌ಸಿಂಗ್ ಹೇಳಿದರು.