Advertisement

ಬಾಂಧವ್ಯಕ್ಕಾಗಿ ಭದ್ರತೆಯಲ್ಲಿ ರಾಜಿ ಇಲ್ಲ: ನೆರೆ-ಹೊರೆ ರಾಷ್ಟ್ರಗಳ ಕುರಿತು ರಾಜನಾಥ್‌ ಸಿಂಗ್‌ ಸ್ಪಷ್ಟ ಮಾತು

11:51 PM Dec 30, 2022 | Team Udayavani |

ತಿರುವನಂತಪುರ: ನೆರೆ-ಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ, ಸ್ನೇಹ ಇರುವುದನ್ನು ನಾವು ಬಯಸುತ್ತೇವೆ. ಆದರೆ ರಾಷ್ಟ್ರೀಯ ಭದ್ರತೆಯನ್ನು ಇದಕ್ಕಾಗಿ ಪಣಕ್ಕೆ ಇಡಲಾಗುವುದಿಲ್ಲ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

Advertisement

ಕೇರಳದ ತಿರುವನಂತಪುರದ ಶಿವಗಿರಿ ಮಠದಲ್ಲಿ ನಡೆದ 90ನೇ ವಾರ್ಷಿಕ ತೀರ್ಥಯಾತ್ರೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾವು ಸ್ನೇಹಿತರನ್ನು ಬದಲಿಸಬಹುದು. ಆದರೆ ನಮ್ಮ ನೆರೆ-ಹೊರೆಯವರನ್ನು ಬದಲಿಸಲು ಆಗು ವುದಿಲ್ಲ,’ ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಉಲ್ಲೇಖೀಸಿದರು.

“ಹೀಗಾಗಿ ನಾವು ನೆರೆ-ಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಅಗತ್ಯ. ಆದರೆ ಸ್ನೇಹಕ್ಕಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜೀ ಆಗುವುದಿಲ್ಲ. ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಆಗುವ ಉತ್ತಮ ಬಾಂಧವ್ಯ ನಮಗೆ ಬೇಕಾಗಿಲ್ಲ,’ ಎಂದು ಹೇಳಿದರು.

“ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಬೋಧನೆಗಳನ್ನು ಕೇಂದ್ರ ಸರಕಾರ ಪಾಲಿಸುತ್ತಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next