Advertisement
ಕೋವಿಡ್ ಹಾಗೂ ವೀಕೆಂಡ್ ಲಾಕ್ ಡೌನ್ ಇದ್ದ ಕಾರಣ ಕೆಲವೇ ಕೆಲವು ಮಂದಿ ಪುಣ್ಯ ಭೂಮಿಯಲ್ಲಿ ಪೂಜೆ ಸಲ್ಲಿಸಬೇಕಾಯಿತು. ಪ್ರತಿ ವರ್ಷ ಅಣ್ಣಾವ್ರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಲವು ಸಾಮಾ ಜಿಕ ಕಾರ್ಯ ಗಳ ಮೂಲಕ ಆಚರಿಸುತ್ತಿದ್ದರು. ಆದರೆ, ಕಳೆದ ವರ್ಷ ಹಾಗೂ ಈ ವರ್ಷ ಕೋವಿಡ್ ದಿಂದ ಸರಳವಾಗಿ ಆಚರಿಸುವ ಅನಿವಾರ್ಯತೆ ಎದುರುರಾಗಿದೆ.
Related Articles
Advertisement
ಪುನೀತ್ ರಾಜ್ ಕುಮಾರ್ ತಮ್ಮ ತಂದೆಯ ಹುಟ್ಟು ಹಬ್ಬಕ್ಕೆ ವಿಭಿನ್ನವಾಗಿ ಕೊಡುಗೆ ನೀಡಿದ್ದಾರೆ. ಅದು ಭಾವನಾ ತ್ಮಕ ಹಾಡೊಂದನ್ನು ಹಾಡುವ ಮೂಲಕ. “ಬಡ ವರ ಬಂಧು’ ಚಿತ್ರದ “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ.. ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ…’ ಹಾಡನ್ನು ಭಾವನಾತ್ಮಕವಾಗಿ ಹಾಡಿದ್ದಾರೆ. ಹಾಡಿನುದ್ದಕ್ಕೂ ಪುನೀತ್ ಭಾವು ಕರಾಗಿದ್ದು ಕಂಡು ಬರುತ್ತದೆ. ತಾವು ಹಾಡಿದ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಪುನೀತ್, “ಅಪ್ಪಾಜಿ ಅವರ ಹುಟ್ಟು ಹಬ್ಬಕ್ಕೆ ನಮ್ಮ ಪುಟ್ಟ ಕಾಣಿಕೆ’ ಎಂದು ಬರೆದು ಕೊಂಡಿದ್ದಾರೆ. ಈ ಹಾಡನ್ನು ಅಭಿ ಮಾನಿಗಳು ಮೆಚ್ಚಿಕೊಂಡಿದ್ದಾರೆ.
ರಾಜ್ ಸ್ಮರಿ ಸಿದ ತಾರೆಯರು :
ಡಾ.ರಾ ಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಅಭಿ ಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುವ ಮೂಲಕ ಸ್ಮರಣೆ ಮಾಡಿದರೆ, ತಾರೆ ಯರು ಕೂಡಾ ಟ್ವೀಟ್ ಮೂಲಕ ರಾಜ್ ಅವರಿಗೆ ನಮಿಸಿದ್ದಾರೆ. ನಟ ರಾದ ಸುದೀಪ್, ದರ್ಶನ್, ರಮೇಶ್ ಅರ ವಿಂದ್, ಜಗ್ಗೇಶ್, ಗಣೇಶ್, ಶರಣ್ ಸೇರಿದಂತೆ ಅನೇಕರು ಟ್ವೀಟ್ ಮೂಲಕ ಅಣ್ಣಾ ವ್ರನ್ನು ನೆನ ಪಿ ಸಿ ಕೊಂಡಿ ದ್ದಾರೆ. ಇನ್ನು ಪರ ಭಾಷೆಯ ಹಲವು ನಟರು ಕೂಡಾ ರಾಜ್ ಹುಟ್ಟು ಹಬ್ಬದಂದು ಸ್ಮರಿ ಸಿ ದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ಅಣ್ಣಾವ್ರ ಜೊತೆಗಿನ ಬಾಂಧ ವ್ಯ ನೆನಪಿಸಿಕೊಂಡು, “ಅಣ್ಣಾವ್ರು ನಿಜವಾದ ಬಂಗಾರದ ಮನುಷ್ಯ. ಅವರು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿ ದ್ದಾರೆ’ ಎಂದಿದ್ದಾರೆ. ಇನ್ನು, ಮಂಗಳೂರು ಪೊಲೀಸ್ ಕಮೀಶನರ್ ಶಶಿ ಕು ಮಾರ್, “ಆಡಿ ಸಿ ನೋಡು, ಬೀಳಿಸಿ ನೋಡು..’ ಹಾಡನ್ನು ಹಾಡುವ ಮೂಲಕ ರಾಜ್ ಅವ ರನ್ನು ಸ್ಮರಿಸಿದ್ದಾರೆ.
ಮೂರು ಕೃತಿಗಳು ಲೋಕಾರ್ಪಣೆ : ವರನಟ ಡಾ. ರಾಜಕುಮಾರ್ ಜನ್ಮದಿನದಂದು ಮೂರು ಕೃತಿಗಳು ಲೋಕಾರ್ಪಣೆಗೊಂಡವು. ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ ನಿರ್ದೇಶಕ ಬಿ ಎಂ. ಗಿರಿರಾಜ ಅವರ ಚೊಚ್ಚಲ ಕೃತಿ “ಕಥೆಗೆ ಸಾವಿಲ್ಲ’ ಮತ್ತು ಎಸ್. ರತ್ನ ವಿಠ್ಠಲ್ಕರ್ ಬರೆದ “ಪುನರ್ವಸಂತ’ ಕವನ ಸಂಕಲನವನ್ನು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಲೋಕಾರ್ಪಣೆಗೊಳಿಸಿದ್ದಾರೆ. ಇನ್ನು ಹಿರಿಯ ಪತ್ರಕರ್ತ ಮಹೇಶ್ ದೇವಶೆಟ್ಟಿ ಬರೆದಿರುವ, “ಬಂಗಾರದ ಮನುಷ್ಯ’ ಚಿತ್ರದ ಕುರಿತ “ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಕೂಡ ಅಣ್ಣಾವ್ರ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ.