Advertisement

ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ

06:07 PM May 12, 2022 | Team Udayavani |

ನವದೆಹಲಿ: ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಗುರುವಾರ ನೇಮಿಸಲಾಗಿದೆ. ಮೇ 14 ರಂದು ಹಾಲಿ ಸುಶೀಲ್ ಚಂದ್ರ ಅಧಿಕಾರ ತ್ಯಜಿಸಿದ ನಂತರ ಕುಮಾರ್ ಮೇ 15 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ.

Advertisement

ಅಧಿಸೂಚನೆಯನ್ನು ಸಾರ್ವಜನಿಕ ವಲಯದೊಂದಿಗೆ ಹಂಚಿಕೊಂಡಿರುವ ಕಾನೂನು ಸಚಿವ ಕಿರಣ್ ರಿಜಿಜು ಅವರು ರಾಜೀವ್ ಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ.

ಜಾರ್ಖಂಡ್ ಕೇಡರ್‌ನ 1984 ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಕುಮಾರ್ ಅವರನ್ನು ಆಗಸ್ಟ್ 2020 ರಲ್ಲಿ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next