Advertisement

ರಾಜೀವ್‌ ಗಾಂಧಿ ವಿವಿ:ಮಂಗಳೂರಿನ ಡಾ|ವಲ್ಲೀಶ್‌ ಶೆಣೈಗೆ 7ಚಿನ್ನದ ಪದಕ

01:33 AM Mar 22, 2019 | |

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಮಾ.26ರಂದು ನಗರದ ನಿಮ್ಹಾನ್ಸ್‌ ಸಭಾಂಗಣದಲ್ಲಿ  ನಡೆಯಲಿದೆ. ಭಾರತ ರತ್ನ ಪ್ರೊ| ಸಿ.ಎನ್‌.ಆರ್‌.ರಾವ್‌ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಮಂಗಳೂರಿನ ಎ.ಜೆ.ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿ ವಿದ್ಯಾರ್ಥಿ ಡಾ|ವಲ್ಲೀಶ್‌ ಶೆಣೈ ಏಳು ಸ್ವರ್ಣ ಪದಕಗಳು ಮತ್ತು ಒಂದು ನಗದು ಬಹುಮಾನ ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ಟಾಪರ್‌ ಆಗಿದ್ದಾರೆ. 
 30,556 ಅಭ್ಯರ್ಥಿಗಳು ತೇರ್ಗಡೆ ಹೊಂದಿ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 44 ಪಿಎಚ್‌.ಡಿ, 129 ಸೂಪರ್‌ ಸ್ಪೆಷಾಲಿಟಿ(ಡಿಎಂ, ಎಂಸಿಎಚ್‌), 5,711 ಸ್ನಾತಕೋತ್ತರ, 175 ಫೆಲೊಶಿಪ್‌ ಕೋರ್ಸ್‌, 16 ಪ್ರಮಾಣಪತ್ರ ಕೋರ್ಸ್‌ ಮತ್ತು 24,481 ಪದವಿ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ವಿವಿಯ ಎಲ್ಲ ವಿಭಾಗದ ಒಟ್ಟು ಫ‌ಲಿತಾಂಶ ಶೇ. 81.11 ಆಗಿದೆ ಎಂದು ಕುಲಪತಿ ಡಾ| ಎಸ್‌.ಸಚ್ಚಿದಾನಂದ ತಿಳಿಸಿದರು. 
ಈ ವರ್ಷ ದಂತ ವೈದ್ಯ ಡಾ| ಕೆ.ಎಸ್‌. ನಾಗರಾಜು ಅವರಿಗೆ ಡಾಕ್ಟರ್‌ ಆಫ್ ಸೈನ್ಸ್‌(ಗೌರವ ಡಾಕ್ಟರೇಟ್‌) ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

Advertisement

400 ಹೆಚ್ಚುವರಿ ಸೀಟುಗಳು
ಭಾರತೀಯ ವೈದ್ಯಕೀಯ ಪರಿಷತ್‌(ಎಂಸಿಐ) ಆಡಳಿತ ಮಂಡಳಿಯು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳ ಉಳಿಕೆ ಸೀಟುಗಳನ್ನು ಎಂ.ಡಿ. ಮತ್ತು ಎಂ.ಎಸ್‌ ಸೀಟಗಳಿಗೆ ವರ್ಗಾಯಿಸಲು ಅನುಮತಿ ನೀಡಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ|ಎಸ್‌.ಸಚ್ಚಿದಾನಂದ ಹೇಳಿದರು. ಸ್ನಾತಕೋತ್ತರ ಡಿಪ್ಲೊಮಾ ಸೀಟುಗಳನ್ನು ಎಂ.ಡಿ ಮತ್ತು ಎಂ.ಎಸ್‌ ಕೋರ್ಸ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರಿಂದ ಸುಮಾರು 400 ಸೀಟುಗಳು ಹೆಚ್ಚುವರಿಯಾಗಿ ದೊರೆಯಲಿವೆೆ. 

ಕಾಲೇಜಿನಲ್ಲಿ ಟಾಪರ್‌ ಆಗಿದ್ದೆ. ವಿಶ್ವವಿದ್ಯಾಲಯದಲ್ಲಿ ಮೊದಲ ರ್‍ಯಾಂಕ್‌ ಬರುತ್ತದೆ ಅಂದುಕೊಂಡಿರಲಿಲ್ಲ. ತುಂಬಾ ಖುಷಿಯಾಗಿದೆ.  ನಿಮ್ಹಾನ್ಸ್‌ನಲ್ಲಿ ನರವಿಜ್ಞಾನ ಶಾಸ್ತ್ರದ ಕೋರ್ಸ್‌ಗೆ ಸೇರಲು ಬೇಕಾದ ತಯಾರಿ ನಡೆಸುತ್ತಿದ್ದೇನೆ. ಮಂಗಳೂರಿನ ಕಾವೂರು ನಮ್ಮ ಊರಾಗಿದ್ದು ತಂದೆ ಬ್ಯಾಂಕ್‌ನ ನಿವೃತ್ತ ಅಧಿಕಾರಿ, ತಾಯಿ ಗೃಹಿಣಿ. ಅಕ್ಕ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ನಾನು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ದರೂ ಕನ್ನಡ ಮತ್ತು ಸಂಸ್ಕೃತದಲ್ಲಿ ತಾಲೂಕಿಗೆ ಟಾಪಾರ್‌ ಆಗಿದ್ದೆ.
-ಡಾ| ವಲ್ಲೀಶ್‌ ಶೆಣೈ, ಏಳು ಚಿನ್ನದ ಪದಕ ವಿಜೇತ

400 ಹೆಚ್ಚುವರಿ ಸೀಟು 

ಬೆಂಗಳೂರು: ಭಾರತೀಯ ವೈದ್ಯಕೀಯ ಪರಿಷತ್ತು(ಎಂಸಿಐ) ಆಡಳಿತ ಮಂಡಳಿಯು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ಗಳ ಉಳಿಕೆ ಸೀಟುಗಳನ್ನು ಎಂ.ಡಿ. ಮತ್ತು ಎಂ.ಎಸ್‌ ಸೀಟಗಳಿಗೆ ವರ್ಗಾಯಿಸಲು ಅನುಮತಿ ನೀಡಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಎಸ್‌.ಸಚ್ಚಿದಾನಂದ ಹೇಳಿದರು. ಸ್ನಾತಕೋತ್ತರ ಡಿಪ್ಲೊಮಾ ಸೀಟುಗಳನ್ನು ಎಂ.ಡಿ ಮತ್ತು ಎಂ.ಎಸ್‌ ಕೋರ್ಸ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರಿಂದ ಸುಮಾರು 400 ಸೀಟುಗಳು ಹೆಚ್ಚುವರಿಯಾಗಿ ದೊರೆಯಲಿದೆ. ಕಳೆದ ವರ್ಷ 2200 ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಿತ್ತು. ಈ ಬಾರಿ ಅದು ಇನ್ನಷ್ಟು ಹೆಚ್ಚಾಗಲಿದೆ ಎಂದು ವಿವರಿಸಿದರು.

Advertisement

ವೈದ್ಯಕೀಯ, ದಂತವೈದ್ಯಕೀಯ, ಆಯುಷ್‌, ಡಿ.ಫಾರ್ಮ ಮೊದಲಾದ ಕೋರ್ಸ್‌ ಗಳ 2019-20ನೇ ಸಾಲಿನ ಸೀಟಿನ ಮಾಹಿತಿ ಕಲೆ ಹಾಕಲಿದ್ದೇವೆ. ಸರ್ಕಾರಿ ವೈದ್ಯಕೀಯ, ದಂತವೈದ್ಯಕೀಯ ಹಾಗೂ ಖಾಸಗಿ ವೈದ್ಯಕೀಯ, ದಂತವೈದ್ಯಕೀಯ ಸೀಟುಗಳ ಮಾಹಿತಿ ಪಡೆಯುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next