ಹೊಸದಿಲ್ಲಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೈದ ಅಪರಾಧಕ್ಕೆ ಜೈಲು ವಾಸ ಅನುಭವಿಸುತ್ತಿರುವ ಏಳು ಮಂದಿ ಕೈದಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟಿಗೆ ಹೇಳಿತು.
ರಾಜೀವ್ ಗಾಂಧಿ ಹಂತಕರ ಬಿಡಗಡೆಯನ್ನು ಬಲವಾಗಿ ಆಕ್ಷೇಪಿಸಿದ ಕೇಂದ್ರ ಸರಕಾರ, ಕೈದಿಗಳನ್ನು ಬಿಡುಗಡೆ ಮಾಡಿದಲ್ಲಿ ಇಡಿಯ ದೇಶಕ್ಕೆ ಮತ್ತು ವಿಶ್ವಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುವುದು ಎಂದು ಹೇಳಿತು.
ರಾಜೀವ್ ಹಂತಕರ ಬಿಡುಗಡೆಯಿಂದ ಅಂತಾರಾಷ್ಟ್ರೀಯ ಸಮಸ್ಯೆ ಉಂಟಾಗುವುದಲ್ಲದೆ ಅಪಾಯಕಾರಿ ಪೂರ್ವ ನಿದರ್ಶನವನ್ನು ಹಾಕಿ ಕೊಟ್ಟಂತಾಗುವುದು ಎಂದು ಕೇಂದ್ರ ಹೇಳಿತು.
ತಮಿಳು ನಾಡು ಸರಕಾರ ಈ ಮೊದಲ ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಏಳು ಕೈದಿಗಳನ್ನು ಬಿಡುಗಡೆ ಮಾಡುವ ಪ್ರಸ್ತಾವವನ್ನು ಸಲ್ಲಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಕೂಡ ಕೈದಿಗಳ ಬಿಡುಗಡೆ ಪ್ರಸ್ತಾವವನ್ನು ವಿರೋಧಿಸಿತ್ತು.
ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಏಳು ಮಂದಿ ಕೈದಿಗಳು ಕಳೆದ 27 ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ.