Advertisement

ಸಿಬಿಐಗೆ ನೋಟಿಸ್‌

09:14 AM Jan 25, 2018 | Team Udayavani |

ಹೊಸದಿಲ್ಲಿ: ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ 26 ವರ್ಷಗಳಿಂದ ಜೈಲಲ್ಲಿರುವ ಎ.ಜಿ.ಪೇರರಿವಾಲನ್‌ ತನ್ನ ವಿರುದ್ಧದ ಶಿಕ್ಷೆ ರದ್ದು ಮಾಡಬೇಕು ಮತ್ತು ಪ್ರಕರಣದ ಮರು ವಿಚಾರಣೆ ನಡೆಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಸಿಬಿಐಗೆ ಈ ಬಗ್ಗೆ ಮೂರು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ. ಘಟನೆಯಲ್ಲಿ ನಡೆದಿದ್ದ ಸಂಚಿನ ಅರಿವು ತನಗಿಲ್ಲ. ಹೀಗಾಗಿ, 1999ರ ಮೇಯಲ್ಲಿ ನೀಡಿದ್ದ ತೀರ್ಪನ್ನು ರದ್ದು ಮಾಡಬೇಕು ಎಂದು ಆತ ಮನವಿ ಮಾಡಿದ್ದ. ಪ್ರಕರಣದ ಮುಂದಿನ ವಿಚಾರಣೆ ಫೆ.21ರಂದು ನಡೆಯಲಿದೆ. ಪೇರರಿವಾಲನ್‌ಗೆ ಗಲ್ಲು ಶಿಕ್ಷೆಯಾಗಿತ್ತಾದರೂ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next