Advertisement

ರಜನಿಕಾಂತ್ 169 ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ; ಶಿವರಾಜ್ ಕುಮಾರ್ ಮುಖ್ಯಪಾತ್ರದಲ್ಲಿ !

03:56 PM Jun 17, 2022 | Team Udayavani |

ಮುಂಬಯಿ : ಸೂಪರ್ ಸ್ಟಾರ್ ರಜನಿಕಾಂತ್ ಅವರ 169 ನೇ ವೈಶಿಷ್ಟ್ಯದ ಬಹು ನಿರೀಕ್ಷಿತ ಚಿತ್ರಕ್ಕೆ “ಜೈಲರ್” ಎಂದು ಹೆಸರಿಡಲಾಗಿದೆ.ಚಿತ್ರದ ಇನ್ನೊಂದು ವಿಶೇಷವೆಂದರೆ ಕನ್ನಡದ ಸೂಪರ್ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೂ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ಬಹಿರಂಗವಾಗಿದೆ.

Advertisement

ಚಲನಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದು, ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್‌ನ ವಿಭಾಗವಾದ ನಿರ್ಮಾಣ ಸಂಸ್ಥೆಯು ಚಿತ್ರದ ಶೀರ್ಷಿಕೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “#ತಲೈವರ್ 169 #ಜೈಲರ್” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ನೆಲ್ಸನ್ ತಮ್ಮದೇ ಸ್ಕ್ರಿಪ್ಟ್‌ನಿಂದ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ಜೈಲರ್” ವಿಜಯ್ ನಾಯಕತ್ವದ  “ಬೀಸ್ಟ್ ” ನಂತರ ಸನ್ ಪಿಕ್ಚರ್ಸ್ ಜತೆಗಿನ ಅವರ ಎರಡನೇ ಚಿತ್ರವಾಗಿದೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

“ಜೈಲರ್” ಅನ್ನು ಕಲಾನಿಧಿ ಮಾರನ್ ಪ್ರಸ್ತುತಪಡಿಸಿದ್ದಾರೆ. ಚಿತ್ರದ ತಾರಾಗಣ ಮತ್ತು ಕಥಾವಸ್ತುವಿಗೆ ಸಂಬಂಧಿಸಿದ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ರಜನಿಕಾಂತ್ ಅವರ “ಅಣ್ಣಾತ್ತೆ” 2021 ರಲ್ಲಿ ಬಿಡುಗಡೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next