Advertisement

ನೆಟ್‌ಫ್ಲಿಕ್ಸ್‌ಗೆ ಬಂತು ರಜನಿಯ “ಅಣ್ಣಾತ್ತೆ’

07:41 PM Nov 25, 2021 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ “ಅಣ್ಣಾತ್ತೆ’ ಸಿನಿಮಾ ಬಿಡುಗಡೆಯಾಗಿ ಈಗಿನ್ನೂ 20 ದಿನಗಳು ಕಳೆದಿವೆ. ಅದಾಗಲೇ ಸಿನಿಮಾ ನೆಟ್‌ಫ್ಲಿಕ್ಸ್‌ಗೂ ಕಾಲಿಟ್ಟಿದೆ.

Advertisement

ನ.4ರಂದು ಬಿಡುಗಡೆಯಾಗಿದ್ದ ಸಿನಿಮಾ ನ.25ಕ್ಕೆ ನೆಟ್‌ಫ್ಲಿಕ್ಸ್‌ನಲ್ಲೂ ಬಿಡುಗಡೆಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದಾಗಲೇ ಒಟಿಟಿಗೂ ಬಂದಿರುವುದನ್ನು ಕಂಡು ರಜನಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮೊದಲ ವಾರದಲ್ಲೇ 150 ಕೋಟಿ ರೂ. ಗಳಿಸಿದ್ದ ಸಿನಿಮಾ ಅದೇಕೆ ಇಷ್ಟು ಬೇಗ ಒಟಿಟಿಗೆ ಬಂತು ಎಂದು ಅನೇಕರು ಪ್ರಶ್ನೆಯನ್ನೂ ಕೇಳಲಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next