Advertisement

“ಕಾಂತಾರ 2′ರಲ್ಲಿ ರಜಿನಿಕಾಂತ್ ನಟನೆ?

02:29 PM Feb 22, 2023 | Team Udayavani |

ರಿಷಭ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ “ಕಾಂತಾರ 2′ ಸಿನಿಮಾ ತೆರೆಗೆ ಬರುತ್ತಿರುವುದನ್ನು ಇತ್ತೀಚೆಗಷ್ಟೇ ಚಿತ್ರತಂಡ ಖಚಿತಪಡಿಸಿದ್ದು, ಸದ್ಯ ಈ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ.

Advertisement

ಇದರ ನಡುವೆಯೇ, ಚಿತ್ರತಂಡ “ಕಾಂತಾರ 2′ ಸಿನಿಮಾ ದಲ್ಲಿ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಲು ರಜಿನಿಕಾಂತ್‌ ಅವರನ್ನು ಸಂಪರ್ಕಿಸಿದೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾ ಗಳಲ್ಲಿ ಜೋರಾಗಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಚಿತ್ರತಂಡ ಮಾತ್ರ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಹಾಗಾಗಿ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದ ನಂತರವಷ್ಟೇ ಈ ಸುದ್ದಿ ಖಚಿತವಾಗಲಿದೆ.

ಇನ್ನು “ಕಾಂತಾರ 2′ ಸಿನಿಮಾದ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ನಟ ಕಂ ನಿರ್ದೇಶಕ ರಿಷಬ್‌ ಶೆಟ್ಟಿ, “ಈ ಸಿನಿಮಾದಲ್ಲಿ ನೀವು ಊಹಿಸಿದಕ್ಕಿಂತ ಹೆಚ್ಚು ದೊಡ್ಡ ಸರ್‌ಪ್ರೈಸ್‌ಗಳು ಇರಲಿವೆ’ ಎಂದಿದ್ದರು. ಅಲ್ಲದೆ “ಕಾಂತಾರ’ ಸಿನಿಮಾ ನೋಡಿ ರಜನಿಕಾಂತ್‌ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಹೀಗಾಗಿ ರಜಿನಿಕಾಂತ್‌ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದರೂ ಅಚ್ಚರಿಯಿಲ್ಲ ಎಂಬುದು ಅನೇಕರ ಅಂದಾಜು.

Advertisement

Udayavani is now on Telegram. Click here to join our channel and stay updated with the latest news.

Next