Advertisement

ರಜನಿಕಾಂತ್- ಶಿವಣ್ಣ ಕಾಂಬಿನೇಶನ್ ನ ‘ಜೈಲರ್’ ಬಿಡುಗಡೆಗೆ ದಿನಾಂಕ ಫಿಕ್ಸ್

01:30 PM May 10, 2023 | Team Udayavani |

ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ ಬಹು ನಿರೀಕ್ಷಿತ “ಜೈಲರ್‌’ ಸಿನಿಮಾದಲ್ಲಿ ನಟ ಶಿವರಾಜಕುಮಾರ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಮಗೆ ಗೊತ್ತಿರಬಹುದು. ಈಗ ರಜನಿಕಾಂತ್‌ ಮತ್ತು ಶಿವಣ್ಣ ಅಭಿನಯದ ಈ ಹೈ ವೋಲ್ಟೇಜ್‌ “ಜೈಲರ್‌’ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್‌ ಆಗಿದೆ.

Advertisement

ಹೌದು, ರಜನಿಕಾಂತ್‌ ಮತ್ತು ಶಿವಣ್ಣ ಕಾಂಬಿನೇಶನ್‌ ನ “ಜೈಲರ್‌’ ಸಿನಿಮಾ ಇದೇ ಆಗಸ್ಟ್‌ 10 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ

“ಜೈಲರ್‌’ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ “ಸನ್‌ ಪಿಕ್ಚರ್’ ಬಹುಕೋಟಿ ವೆಚ್ಚದಲ್ಲಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಇದೀಗ “ಜೈಲರ್‌’ ಸಿನಿಮಾದ ಬಿಡುಗಡೆ ದಿನಾಂಕ ಮತ್ತು ಟೀಸರ್‌ ಅನ್ನು “ಸನ್‌ ಪಿಕ್ಚರ್’ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. “ಜೈಲರ್‌’ ಸಿನಿಮಾದಲ್ಲಿ ರಜನಿಕಾಂತ್‌, ಶಿವರಾಜಕುಮಾರ್‌ ಅವರೊಂದಿಗೆ ಮಲಯಾಳಂ ನಟ ಮೋಹನ್‌ ಲಾಲ್, ತಮನ್ನಾ ಭಾಟಿಯಾ, ಜಾಕಿ ಶ್ರಾಫ್, ರಮ್ಯಾ ಕೃಷ್ಣನ್‌, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ ತಮಿಳಿನಲ್ಲಿ ವಿಜಯ್‌ ನಟನೆಯ “ಬೀಸ್ಟ್‌’ ಸಿನಿಮಾವನ್ನು ನಿರ್ದೇಶಿಸಿದ್ದ ನೆಲ್ಸನ್‌ “ಜೈಲರ್‌’ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್‌ ಸಂಗೀತ ಸಂಯೋಜಿಸಿದ್ದಾರೆ.

ಇನ್ನು “ಜೈಲರ್‌’ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿರುವ ನಟ ಶಿವರಾಜಕುಮಾರ್‌, “ರಜನಿಕಾಂತ್‌ ಅವರೊಂದಿಗೆ ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಬಹು ವರ್ಷಗಳ ಕನಸು “ಜೈಲರ್‌’ ಸಿನಿಮಾದಲ್ಲಿ ನನಸಾಗಿದೆ. ತುಂಬ ದೊಡ್ಡ ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಕೆಲಸ ಮಾಡಿದ್ದು, ಹೊಸಥರದ ಅನುಭವ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next