Advertisement

ರಜನಿ ಪಕ್ಷದ ಆ್ಯಪ್‌ ಬಿಡುಗಡೆ

09:55 AM Jan 02, 2018 | Team Udayavani |

ಚೆನ್ನೈ: ರಾಜಕೀಯಕ್ಕೆ ಅಧಿಕೃತವಾಗಿ ಕಾಲಿಟ್ಟಿರುವ ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌, ತಮ್ಮ ಹೊಸ ಪಕ್ಷ ಸ್ಥಾಪನೆ ಕುರಿತಂತೆ ಮೊದಲ ಹೆಜ್ಜೆಯಿಟ್ಟಿದ್ದಾರೆ. ತಮ್ಮ ಉದ್ದೇಶಿತ ಸಂಘಟನೆಗಾಗಿ ‘ರಜನಿ ಮಂದ್ರಂ’ ಎಂಬ ಹೊಸ ವೆಬ್‌ಸೈಟ್‌ ಆರಂಭಿಸಿರುವ ಅವರು, ಆಸಕ್ತರು ತಮ್ಮ ಹೆಸರನ್ನು ‘ರಜನಿಕಾಂತ್‌ ಸಾರಿಗರ್‌ ಮಂದ್ರಂ (ಅಖೀಲ ಭಾರತ ರಜನಿಕಾಂತ್‌ ಅಭಿಮಾನಿಗಳ ಸಂಘ)’ದ ಅಡಿಯಲ್ಲಿ  ನೊಂದಾಯಿಸಿಕೊಳ್ಳಲು ಕರೆ ನೀಡಿದ್ದಾರೆ. 

Advertisement

ಆ್ಯಂಡ್ರಾಯ್ಡ ಮೊಬೈಲ್‌ಗ‌ಳ ಬಳಕೆದಾರರಿಗಾಗಿಯೂ ‘ರಜನಿ ಮಂದ್ರಂ’ ಹೆಸರಿನಲ್ಲೇ ಅಪ್ಲಿಕೇಷನ್‌ನೊಂದನ್ನು ಬಿಡುಗಡೆ ಮಾಡಲಾಗಿದ್ದು ಆ ಮೂಲಕವೂ ಹೆಸರನ್ನು ದಾಖಲಿಸಲು ಅನುವು ಮಾಡಿಕೊಡಲಾಗಿದೆ. ನೋಂದಾವಣಿಯಲ್ಲಿ ನಿರ್ದಿಷ್ಟ ಗುರಿ ತಲುಪಿದ ನಂತರ, ಈ ಸಂಘಟನೆಯನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಲು ಆಲೋಚಿಸಿದ್ದಾರೆ. ಏತನ್ಮಧ್ಯೆ, ಹೆಸರು ನೊಂದಣಿ ಬಗ್ಗೆ ಒಂದು ನಿಮಿಷದ ವೀಡಿಯೋ ಕ್ಲಿಪ್‌ ಬಿಡುಗಡೆ ಮಾಡಿರುವ ಅವರು, ಅದರಲ್ಲಿ ತಮ್ಮ ರಾಜಕೀಯ ಪ್ರವೇಶ ನಿರ್ಧಾರ ಸ್ವಾಗತಿಸಿದವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಬದಲಾವಣೆಗೆ ಆಸಕ್ತಿಯಿದ್ದವರು ತಮ್ಮ ಸಂಘಟನೆಯಲ್ಲಿ ಹೆಸರು ದಾಖಲಿಸಿಕೊಳ್ಳುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next