ಚೆನ್ನೈ: ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಹಕ್ಕುಗಳ ಉಲ್ಲಂಘನೆಯ ಕುರಿತು ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದಾರೆ
ಹೆಸರು, ಚಿತ್ರ, ಧ್ವನಿ ಇತ್ಯಾದಿಗಳನ್ನು ತಮ್ಮ ಒಪ್ಪಿಗೆ ಪಡೆಯದೆ ವಾಣಿಜ್ಯಿಕವಾಗಿ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಧ್ವನಿ, ಚಿತ್ರ, ಹೆಸರು ಮತ್ತು ಅವರ ಇತರ ವಿಶಿಷ್ಟ ನಡವಳಿಕೆಯನ್ನು ಒಳಗೊಂಡಂತೆ ನಟನ ವ್ಯಕ್ತಿತ್ವವನ್ನು ಉಲ್ಲಂಘಿಸುವವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳ ಎಚ್ಚರಿಕೆಯನ್ನು ರಜನಿಕಾಂತ್ ಅವರ ವಕೀಲ ಎಸ್.ಎಳಂಭರತಿ ಸಾರ್ವಜನಿಕ ನೋಟಿಸ್ ನೀಡಿದ್ದಾರೆ.
ವ್ಯಕ್ತಿತ್ವ, ಹೆಸರು, ಧ್ವನಿ, ಚಿತ್ರ ಇತ್ಯಾದಿಗಳ ವಾಣಿಜ್ಯ ಬಳಕೆಯ ಮೇಲೆ ರಜನಿಕಾಂತ್ ಅವರಿಗೆ ಮಾತ್ರ ನಿಯಂತ್ರಣವಿದೆ ಎಂದು ಶನಿವಾರ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಹಲವಾರು ಮಾಧ್ಯಮಗಳು, ವೇದಿಕೆಗಳು, ಉತ್ಪನ್ನ ತಯಾರಕರು ಅವರ ಹೆಸರು, ಚಿತ್ರ, ಧ್ವನಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.